॥ಅಥ ಅಯೋಧ್ಯಾಕಾಂಡಃ॥ ಏತಸ್ಮಿನ್ನಂತರೇ ಗೇಹಂ ಮಾತುಲಸ್ಯ ಯುಧಾಜಿತಃ। ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥೨।೧॥ ಪದಚ್ಛೇದ: ಏತಸ್ಮಿನ್ ಅಂತರೇ ಗೇಹಂ ಮಾತುಲಸ್ಯ ಯುಧಾಜಿತಃ ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥ ಅನ್ವಯ ಅರ್ಥ: ಏತಸ್ಮಿನ್ ಅಂತರೇ (ಇದೇ ಸಮಯದಲ್ಲಿ) ಪ್ರೀತಃ ಭರತಃ (ಪ್ರೀತಿ ತುಂಬಿದ ಭರತನು) ಶತ್ರುಘ್ನೇನ ಸಮನ್ವಿತಃ (ಶತ್ರುಘ್ನನನ್ನು ಕೂಡಿಕೊಂಡು) ಮಾತುಲಸ್ಯ (ಸೋದರಮಾವನಾದ) ಯುಧಾಜಿತಃ(ಯುಧಾಜಿತನ) ಗೇಹಂ (ಮನೆಗೆ) ಪ್ರಯಯೌ (ಹೋದನು) ಭಾವಾರ್ಥ: ವಿವಾಹಾನಂತರ ಅಯೋಧ್ಯೆಯಲ್ಲಿ ಎಲ್ಲರೂ ಸುಖವಾಗಿರುವ ಸಮಯದಲ್ಲಿ ಪ್ರೀತಿ ತುಂಬಿದ ಭರತನು ಸೋದರಮಾವನಾದ ಯುಧಾಜಿತನ ಮನೆಗೆ ಹೋದನು. ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥೨।೨॥ ಪದಚ್ಛೇದ: ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸಃ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥ ಅನ್ವಯ ಅರ್ಥ: ತತಃ (ಆಗ) ಪ್ರಕತಿಭಿಃ ಸಾಕಂ(ಪೌರಶ್ರೇಷ್ಠರೊಂದಿಗೆ) ಮಂತ್ರಯಿತ್ವಾ (ಸಮಾಲೋಚಿಸಿ) ಸಃ ಭೂಪತಿಃ (ಆ ರಾಜನು) ಮುದಾನ್ವಿತಃ(ಸಂತಸದಿಂದ ಕೂಡಿದವನಾಗಿ) ರಾಮಸ್ಯ (ರಾಮನ) ಅಭಿಷೇಕಾಯ(ಅಭಿಷೇಕಕ್ಕೆ) ಸಮಾರೇಭೇ(ಅಣಿಯಾದನು) ಭ...
Posts
Showing posts from May, 2019