ಅರಣ್ಯಕಾಂಡಃ
॥ಅಥ ಅರಣ್ಯಕಾಂಡಃ॥ ವ್ರಜನ್ವನೇನ ಕಾಕುತ್ಸ್ಥೋ ವಿರಾಧಂ ವಿಧಿಚೋದಿತಮ್। ಸದಾರಾನುಜಮಾತ್ಮಾನಂ ಹರಂತಮವಧೀತ್ತದಾ॥೩।೧॥ ಪದಚ್ಛೇದ: ವ್ರಜನ್ ವನೇನ ಕಾಕುತ್ಸ್ಥಃ ವಿರಾಧಂ ವಿಧಿಚೋದಿತಮ್ ಸದಾರಾನುಜಂ ಆತ್ಮಾನಂ ಹರಂತಮ್ ಅವಧೀತ್ ತದಾ ॥ ಅನ್ವಯ ಅರ್ಥ: ವನೇನ (ಕಾಡಿನಿಂದ ಕಾಡಿಗೆ) ವ್ರಜನ್ (ಅಲೆದಾಡುತ್ತಾ) ಕಾಕುತ್ಸ್ಥಃ (ರಾಮನು) ಸದಾರಾನುಜಮ್(ಪತ್ನಿ ಮತ್ತು ಸೋದರನಿಂದೊಡಗೂಡಿದ) ಆತ್ಮಾನಂ (ತನ್ನನ್ನು) ವಿಧಿಚೋದಿತಮ್ (ವಿಧಿಯಿಂದ ಪ್ರಚೋದಿಸಲ್ಪಟ್ಟು) ಹರಂತಮ್ (ಕೊಲ್ಲುತ್ತಿದ್ದ) ವಿರಾಧಂ(ವಿರಾಧನನ್ನು) ಅವಧೀತ್(ವಧಿಸಿದನು). ಭಾವಾರ್ಥ: ದಂಡಕಾರಣ್ಯದಲ್ಲಿ ಸೀತಾಲಕ್ಷ್ಮಣರೊಂದಿಗೆ ಅಲೆದಾಡುತ್ತಿದ್ದ ರಾಮನನ್ನು ವಿರಾಧನೆಂಬ ರಾಕ್ಷಸನು ಅಡ್ಡಗಟ್ಟಿದನು. ವಿಧಿಯಿಂದ ಪ್ರೇರಿತನಾಗಿ ಆ ಮೂವರನ್ನೂ ಕೊಲ್ಲಲನುವಾದನು. ಸರ್ವಜೀವಪೀಡಕನಾದ ಆತನು ಆಯುಧಗಳಿಂದ ಅವಧ್ಯನು. ರಾಮನು ಆತನ ಕಂಠಪ್ರದೇಶದಲ್ಲಿ ಮೆಟ್ಟಿ ಕುಣಿಯಲ್ಲಿ ಹೂತು ವಧಿಸಿದನು. ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ। ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿರರ್ಚಿತಃ ॥೩।೨॥ ಪದಚ್ಛೇದ: ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿಃ ಅರ್ಚಿತಃ ॥ ಅನ್ವಯ ಅರ್ಥ: ಸಃ(ಅವನು) ಶರಭಂಗಾಶ್ರಮಂ ಗತ್ವಾ (ಶರಭಂಗಾಶ್ರಮಕ್ಕೆ ಹೋಗಿ) ತಸ್ಯ (ಅವರ) ಸ್ವರ್ಗತಿಂ (ಸ್ವರ್ಗಾರೋಹಣವನ್ನು) ವೀಕ್ಷ್ಯ (ನೋಡಿ) ಮುನಿಭಿಃ ...