॥ಅಥ ಅಯೋಧ್ಯಾಕಾಂಡಃ॥
ಏತಸ್ಮಿನ್ನಂತರೇ ಗೇಹಂ ಮಾತುಲಸ್ಯ ಯುಧಾಜಿತಃ।
ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥೨।೧॥
ಪದಚ್ಛೇದ:
ಏತಸ್ಮಿನ್ ಅಂತರೇ ಗೇಹಂ ಮಾತುಲಸ್ಯ ಯುಧಾಜಿತಃ ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥
ಅನ್ವಯ ಅರ್ಥ:
ಏತಸ್ಮಿನ್ ಅಂತರೇ (ಇದೇ ಸಮಯದಲ್ಲಿ)
ಪ್ರೀತಃ ಭರತಃ (ಪ್ರೀತಿ ತುಂಬಿದ ಭರತನು)
ಶತ್ರುಘ್ನೇನ ಸಮನ್ವಿತಃ (ಶತ್ರುಘ್ನನನ್ನು ಕೂಡಿಕೊಂಡು) ಮಾತುಲಸ್ಯ (ಸೋದರಮಾವನಾದ) ಯುಧಾಜಿತಃ(ಯುಧಾಜಿತನ)
ಗೇಹಂ (ಮನೆಗೆ)
ಪ್ರಯಯೌ (ಹೋದನು)
ಭಾವಾರ್ಥ:
ವಿವಾಹಾನಂತರ ಅಯೋಧ್ಯೆಯಲ್ಲಿ ಎಲ್ಲರೂ ಸುಖವಾಗಿರುವ ಸಮಯದಲ್ಲಿ ಪ್ರೀತಿ ತುಂಬಿದ ಭರತನು ಸೋದರಮಾವನಾದ ಯುಧಾಜಿತನ ಮನೆಗೆ ಹೋದನು.
ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥೨।೨॥
ಪದಚ್ಛೇದ:
ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸಃ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥
ಅನ್ವಯ ಅರ್ಥ:
ತತಃ (ಆಗ)
ಪ್ರಕತಿಭಿಃ ಸಾಕಂ(ಪೌರಶ್ರೇಷ್ಠರೊಂದಿಗೆ)
ಮಂತ್ರಯಿತ್ವಾ (ಸಮಾಲೋಚಿಸಿ)
ಸಃ ಭೂಪತಿಃ (ಆ ರಾಜನು)
ಮುದಾನ್ವಿತಃ(ಸಂತಸದಿಂದ ಕೂಡಿದವನಾಗಿ)
ರಾಮಸ್ಯ (ರಾಮನ)
ಅಭಿಷೇಕಾಯ(ಅಭಿಷೇಕಕ್ಕೆ)
ಸಮಾರೇಭೇ(ಅಣಿಯಾದನು)
ಭಾವಾರ್ಥ:
ಆಗ ರಾಜಾ ದಶರಥನ ಮನದಲ್ಲಿ ರಾಮನಿಗೆ ಯುವರಾಜ ಪಟ್ಟಾಭಿಷೇಕ ಮಾಡುವ ಯೋಚನೆ ಉಂಟಾಯಿತು. ಅದಕ್ಕಾಗಿ ದೈವಜ್ಞ, ಧರ್ಮಾಧ್ಯಕ್ಷ, ಧನಾಧ್ಯಕ್ಷ ಪೌರಶ್ರೇಷ್ಠರೇ ಮೊದಲಾಧವರನ್ನೊಳಗೊಂಡ ಪ್ರಕೃತಿಸಭೆಯಲ್ಲಿ ಸಮಾಲೋಚಿಸಿ ಒಪ್ಪಿಗೆ ಪಡೆದು ಸಂತೋಷದಿಂದ ರಾಮನ ಪಟ್ಟಾಭಿಷೇಕಕ್ಕೆ ಅಣಿಯಾದನು.
ಕೈಕೇಯೀ ತು ಮಹಾರಾಜಂ ಮಂಥರಾದೂಷಿತಾಶಯಾ। ವರದ್ವಯಂ ಪುರಾ ದತ್ತಂ ಯಯಾಚೇ ಸತ್ಯಸಂಗರಮ್॥೨।೩॥
ಪದಚ್ಛೇದ:
ಕೈಕೇಯೀ ತು ಮಹಾರಾಜಂ ಮಂಥರಾದೂಷಿತಾಶಯಾ। ವರದ್ವಯಂ ಪುರಾ ದತ್ತಂ ಯಯಾಚೇ ಸತ್ಯಸಂಗರಮ್।।
ಅನ್ವಯ ಅರ್ಥ:
ಕೈಕೇಯೀ ತು (ಕೈಕೇಯಿಯಾದರೋ) ಮಂಥರಾದೂಷಿತಾಶಯಾ (ಮಂಥರೆಯಿಂದ ಕೆಡಿಸಲ್ಪಟ್ಟ ಆಸೆಯಿಂದ )
ಸತ್ಯಸಂಗರಂ(ಸತ್ಯವ್ರತನಾದ)
ಮಹಾರಾಜಂ (ಮಹಾರಾಜನನ್ನು)
ಪುರಾದತ್ತಂ(ಹಿಂದೆ ಕೊಡಲ್ಪಟ್ಟಿದ್ದ)
ವರದ್ವಯಂ (ಎರಡು ವರಗಳನ್ನು)
ಯಯಾಚೇ (ಕೇಳಿಕೊಂಡಳು)
ಭಾವಾರ್ಥ:
ಇದನ್ನು ತಿಳಿದು ದಾಸಿ ಮಂಥರೆಯ ದುರ್ಬೋಧನೆಯಿಂದ ದುರಾಸೆಗೊಳಗಾದ ಕೈಕೇಯಿಯು ಹಿಂದೆ ಸತ್ಯನಿಷ್ಠನಾದ ಮಹಾರಾಜನಿಂದ ಪಡೆದಿದ್ದ ಎರಡು ವರಗಳನ್ನು ಬೇಡಿಕೊಂಡಳು.
ವನವಾಸಾಯ ರಾಮಸ್ಯ ರಾಜ್ಯಾಪ್ತ್ಯೈ ಭರತಸ್ಯ ಚ।
ತಸ್ಯಾಃ ವರದ್ವಯಂ ಕೃಚ್ಛ್ರಂ ಅನುಜಜ್ಞೇ ಮಹೀಪತಿಃ ॥೨।೪॥
ಅನ್ವಯ ಅರ್ಥ:
ರಾಮಸ್ಯ (ರಾಮನಿಗೆ)
ವನವಾಸಾಯ(ವನವಾಸಕ್ಕೆ)
ಚ (ಮತ್ತು)
ಭರತಸ್ಯ(ಭರತನಿಗೆ)
ರಾಜ್ಯಾಪ್ತ್ಯೈ(ರಾಜ್ಯಪ್ರಾಪ್ತಿಗೆ)
(ಯಾಚಿತಂ ಕೇಳಲ್ಪಟ್ಟ)
ತಸ್ಯಾಃ(ಅವಳ)
ವರದ್ವಯಂ (ವರಗಳೆರಡನ್ನು)
ಕೃಚ್ಛ್ರೇಣ (ಬಹಳ ಕಷ್ಟದಿಂದ)
ಮಹೀಪತಿಃ (ರಾಜನು)
ಅನುಜಜ್ಞೇ (ಅನುಮತಿಸಿದನು)
ಭಾವಾರ್ಥ:
ವಿಧಿಯ ಕೈವಾಡದಿಂದ ಕೈಕೇಯಿಯು ರಾಮನಿಗೆ ವನವಾಸವನ್ನೂ ಭರತನಿಗೆ ರಾಜ್ಯವನ್ನೂ ವರವಾಗಿ ಕೇಳಿಕೊಂಡಳು. ಅನುಮತಿಸುವುದು ಅಸಾಧ್ಯವೇ ಆದರೂ ಕೊಟ್ಟ ಮಾತಿಗೆ ಕಟ್ಟುಬಿದ್ದು ಬಹಳ ಕಷ್ಟದಿಂದ ರಾಜನು ಮೌನಸಮ್ಮತಿಯನ್ನು ನೀಡಿದನು.
ರಾಮಂ ತದೈವ ಕೈಕೇಯೀ ವನವಾಸಾಯ ಚಾದಿಶತ್। ಅನುಜ್ಞಾಪ್ಯ ಗುರೂನ್ಸರ್ವಾನ್ನಿರ್ಯಯೌ ಚ ವನಾಯ ಸಃ॥೨।೫॥
ಪದಚ್ಛೇದ:
ರಾಮಂ ತದಾ ಏವ ಕೈಕೇಯೀ ವನವಾಸಾಯ ಚ ಆದಿಶತ್। ಅನುಜ್ಞಾಪ್ಯ ಗುರೂನ್ ಸರ್ವಾನ್ ನಿರ್ಯಯೌ ಚ ವನಾಯ ಸಃ॥
ಅನ್ವಯ ಅರ್ಥ:
ಕೈಕೇಯೀ (ಕೈಕೇಯಿಯು)
ತದಾ ಏವ (ಆಗಲೇ)
ರಾಮಂ (ರಾಮನನ್ನು ಕುರಿತು)
ವನವಾಸಾಯ (ವನವಾಸಕ್ಕೆ)
ಆದಿಶತ್(ಅಪ್ಪಣೆ ಮಾಡಿದಳು)
ಸಃ ಚ(ಅವನೂ ಕೂಡ)
ಸರ್ವಾನ್ ಗುರೂನ್ (ಗುರುಹಿರಿಯರೆಲ್ಲರ)
ಅನುಜ್ಞಾಪ್ಯ (ಅನುಜ್ಞೆ ಪಡೆದು)
ವನಾಯ (ಕಾಡಿಗೆ )
ನಿರ್ಯಯೌ (ನಿರ್ಗಮಿಸಿದನು)
ಭಾವಾರ್ಥ:
ಮಹಾರಾಜನ ಮೌನವೇ ಸಮ್ಮತಿಯೆಂದು ಕೈಕೇಯಿಯು ತಕ್ಷಣವೇ ರಾಮನಿಗೆ ವನವಾಸವನ್ನು ವಿಧಿಸಿದಳು. ರಾಮನೂ ಕೂಡ ಪಿತೃವಾಕ್ಯಪರಿಪಾಲನೆಗಾಗಿ ಗುರುಹಿರಿಯರಿಗೆ ನಮಿಸಿ ಅಪ್ಪಣೆ ಪಡೆದು ವನವಾಸಕ್ಕೆ ತೆರಳಲನುವಾದನು.
ದೃಷ್ಟ್ವಾ ತಂ ನಿರ್ಗತಂ ಸೀತಾ ಲಕ್ಷ್ಮಣಶ್ಚಾನುಜಗ್ಮತುಃ।
ಸಂತ್ಯಜ್ಯ ಸ್ವಗೃಹಾನ್ಸರ್ವೇ ಪೌರಾಶ್ಚಾನುಯಯುರ್ದ್ರುತಮ್॥೨।೬॥
ಪದಚ್ಛೇದ:
ದೃಷ್ಟ್ವಾ ತಂ ನಿರ್ಗತಂ ಸೀತಾ ಲಕ್ಷ್ಮಣಃ ಚ ಅನುಜಗ್ಮತುಃ। ಸಂತ್ಯಜ್ಯ ಸ್ವಗೃಹಾನ್ ಸರ್ವೇ ಪೌರಾಃ ಚ ಅನುಯಯುಃ ದ್ರುತಮ್ ॥
ಅನ್ವಯ ಅರ್ಥ:
ತಂ ನಿರ್ಗತಂ (ಹೊರಟ ಅವನನ್ನು)
ದೃಷ್ಟ್ವಾ (ನೋಡಿ)
ಸೀತಾ (ಸೀತೆಯೂ )
ಲಕ್ಷ್ಮಣಃ ಚ(ಲಕ್ಷ್ಮಣನೂ)
ಅನುಜಗ್ಮತುಃ (ಹಿಂಬಾಲಿಸಿದರು)
ಸರ್ವೇ ಪೌರಾಃ ಚ(ಎಲ್ಲಾ ಪುರಜನರೂ)
ಸ್ವಗೃಹಾನ್ (ತಮ್ಮ ಮನೆಗಳನ್ನು)
ಸಂತ್ಯಜ್ಯ (ತೊರೆದು)
ದ್ರುತಂ(ಶೀಘ್ರವಾಗಿ)
ಅನುಯಯುಃ (ಹಿಂಬಾಲಿಸಿದರು)
ಭಾವಾರ್ಥ:
ರಾಮನು ಹೊರಟುದನ್ನು ಕಂಡು ಅವನನ್ನು ಅಗಲಿರಲಾರದೆ ಸೀತೆಯೂ ಲಕ್ಷ್ಮಣನೂ ಅವನ ಜೊತೆ ಸೇರಿ ವನವಾಸಕ್ಕೆ ಅನುವಾದರು. ರಾಮನಿಲ್ಲದ ಊರೇ ಬೇಡವೆಂದು ಎಲ್ಲಾ ಪುರಜನರೂ ತಮ್ಮ ಮನೆಮಠ ತೊರೆದು ಅವನನ್ನು ಹಿಂಬಾಲಿಸಿದರು.
ವಂಚಯಿತ್ವಾ ಕೃಶಾನ್ಪೌರಾನ್ನಿದ್ರಾಣಾನ್ನಿಶಿ ರಾಘವಃ। ವಾಹ್ಯಮಾನಂ ಸುಮಂತ್ರೇಣ ರಥಮಾರುಹ್ಯ ಚಾಗಮತ್॥೨।೭॥
ಪದಚ್ಛೇದ:
ವಂಚಯಿತ್ವಾ ಕೃಶಾನ್ ಪೌರಾನ್ ನಿದ್ರಾಣಾನ್ ನಿಶಿ ರಾಘವಃ। ವಾಹ್ಯಮಾನಂ ಸುಮಂತ್ರೇಣ ರಥಮ್ ಆರುಹ್ಯ ಚ ಅಗಮತ್।
ಅನ್ವಯ ಅರ್ಥ:
ನಿಶಿ(ರಾತ್ರಿಯಲ್ಲಿ)
ನಿದ್ರಾಣಾನ್ (ನಿದ್ರಿಸುತ್ತದ್ದ)
ಕೃಶಾನ್(ಆಯಾಸಗೊಂಡ)
ಪೌರಾನ್(ಆ ಪುರಜನರನ್ನು)
ರಾಘವಃ (ರಾಮನು)
ವಂಚಯಿತ್ವಾ (ವಂಚಿಸಿ)
ಸುಮಂತ್ರೇಣ (ಸುಮಂತ್ರನಿಂದ)
ವಾಹ್ಯಮಾನಂ (ನಡೆಸಲ್ಪಡುವ)
ರಥಂ (ರಥವನ್ನು)
ಆರುಹ್ಯ (ಏರಿ)
ಅಗಮತ್(ಹೊರಟುಹೋದನು)
ಭಾವಾರ್ಥ: ಬೆಂಬಿಡದೆ ಬರುತ್ತಿದ್ದ ಪೌರರನ್ನು ಅನುನಯಿಸಿ ಹಿಂದಿರುಗುವಂತೆ ಮಾಡಲು ಸಾಧ್ಯವಾಗದೆ ರಾಮನು ಅವರು ಆಯಾಸದಿಂದ ನಿದ್ರಿಸಿರುವ ಸಮಯದಲ್ಲಿ ಅವರಿಗೆ ಅರಿವಾಗದಂತೆ ಸುಮಂತ್ರನು ನಡೆಸುತ್ತಿದ್ದ ರಥವನ್ನೇರಿ ಹೊರಟುಹೋದನು.
ಶೃಂಗವೇರಪುರಂ ಗತ್ವಾ ಗಂಗಾಕೂಲೇಽಥ ರಾಘವಃ।
ಗುಹೇನ ಸತ್ಕೃತಸ್ತತ್ರ ನಿಶಾಮೇಕಾಮುವಾಸ ಹ॥ ೨।೮॥
ಪದಚ್ಛೇದ:
ಶೃಂಗವೇರಪುರಂ ಗತ್ವಾ ಗಂಗಾಕೂಲೇ ಅಥ ರಾಘವಃ । ಗುಹೇನ ಸತ್ಕೃತಃ ತತ್ರ ನಿಶಾಮ್ ಏಕಾಮ್ ಉವಾಸ ಹ॥
ಅನ್ವಯ ಅರ್ಥ:
ಅಥ ರಾಘವಃ (ನಂತರ ರಾಮನು)
ಗಂಗಾಕೂಲೇ (ಗಂಗಾತಟದಲ್ಲಿರುವ)
ಶೃಂಗವೇರಪುರಂ (ಶೃಂಗವೇರಪುರವನ್ನು)
ಗತ್ವಾ (ಸೇರಿ)
ತತ್ರ (ಅಲ್ಲಿ)
ಗುಹೇನ (ಗುಹನಿಂದ)
ಸತ್ಕೃತಃ (ಸತ್ಕರಿಸಲ್ಪಟ್ಟು)
ಏಕಾಂ ನಿಶಾಂ(ಒಂದು ರಾತ್ರಿ)
ಉವಾಸ(ತಂಗಿದನು).
ಭಾವಾರ್ಥ:
ಮುಂಬರಿದ ರಾಘವನು ಗಂಗಾತೀರದಲ್ಲಿ ಗುಹನ ಆಧಿಪತ್ಯದ ಶೃಂಗವೇರಪುರವನ್ನು ಸೇರಿದನು. ಅವನ ಆತಿಥ್ಯವನ್ನು ಸ್ವೀಕರಿಸಿ ರಾತ್ರಿಯೊಂದನ್ನು ಅಲ್ಲಿಯೇ ಕಳೆದನು.
ಸಾರಥಿಂ ಸಂನಿಮಂತ್ರ್ಯಾಸೌ ಸೀತಾಲಕ್ಷ್ಣಸಂಯುತಃ। ಗುಹೇನಾನೀತಯಾ ನಾವಾ ಸಂತತಾರ ಚ ಜಾಹ್ನವೀಮ್॥೨।೯॥
ಪದಚ್ಛೇದ:
ಸಾರಥಿಂ ಸಂನಿಮಂತ್ರ್ಯ ಅಸೌ ಸೀತಾಲಕ್ಷ್ಮಣಸಂಯುತಃ। ಗುಹೇನ ಆನೀತಯಾ ನಾವಾ ಸಂತತಾರ ಚ ಜಾಹ್ನವೀಮ್॥
ಅನ್ವಯ ಅರ್ಥ:
ಸೀತಾಲಕ್ಷ್ಮಣಸಂಯುತಃ (ಸೀತಾಲಕ್ಷ್ಮಣರಿಂದೊಗೂಡಿದ) ಅಸೌ(ಆ ರಾಮನು)
ಸಾರಥಿಂ (ಸಾರಥಿಯನ್ನು)
ಸಂನಿಮಂತ್ರ್ಯ(ಬೀಳ್ಕೊಟ್ಟು)
ಗುಹೇನ(ಗುಹನಿಂದ)
ಆನೀತಯಾ (ತರಲ್ಪಟ್ಟ)
ನಾವಾ (ನಾವೆಯಿಂದ)
ಜಾಹ್ನವೀಂ (ಗಂಗೆಯನ್ನು)
ಸಂತತಾರ(ದಾಟಿದನು)
ಭಾವಾರ್ಥ:
ವನವಾಸದೀಕ್ಷೆ ಕೈಗೊಂಡ ರಾಮನು ಅಯೋಧ್ಯೆಯ ಸರಹದ್ದಿನಲ್ಲಿ ರಥಯಾತ್ರೆಯನ್ನು ಕೊನೆಗೊಳಿಸಿ ಸಾರಥಿಯನ್ನು ಬೀಳ್ಕೊಂಡನು. ಗುಹನು ಏರ್ಪಡಿಸಿದ್ದ ನಾವೆಯನ್ನೇರಿ ಸೀತಾಲಕ್ಷ್ಮಣರೊಂದಿಗೆ ವನವನ್ನು ಸೇರಿದನು.
ಭಾರದ್ವಾಜಮುನಿಂ ಪ್ರಾಪ್ಯ ತಂ ನತ್ವಾ ತೇನ ಸತ್ಕೃತಃ। ರಾಘವಸ್ತಸ್ಯ ನಿರ್ದೇಶಾಚ್ಚಿತ್ರಕೂಟೇಽವಸತ್ಸುಖಮ್॥೨।೧೦॥
ಪದಚ್ಛೇದ:
ಭಾರದ್ವಾಜಮುನಿಂ ಪ್ರಾಪ್ಯ ತಂ ನತ್ವಾ ತೇನ ಸತ್ಕೃತಃ ರಾಘವಃ ತಸ್ಯ ನಿರ್ದೇಶಾತ್ ಚಿತ್ರಕೂಟೇ ಅವಸತ್ ಸುಖಮ್॥
ಅನ್ವಯ ಅರ್ಥ:
ರಾಘವಃ(ರಾಮನು)
ಭಾರದ್ವಾಜಮುನಿಂ (ಭಾರದ್ವಾಜಮುನಿಯನ್ನು)
ಪ್ರಾಪ್ಯ (ಸೇರಿ)
ತಂ(ಅವರನ್ನು)
ನತ್ವಾ (ನಮಿಸಿ)
ತೇನ (ಅವರಿಂದ )
ಸತ್ಕೃತಃ (ಸತ್ಕರಿಸಲ್ಪಟ್ಟು)
ತಸ್ಯ (ಅವರ)
ನಿರ್ದೇಶಾತ್ (ನಿರ್ದೇಶದಂತೆ)
ಚಿತ್ರಕೂಟೇ(ಚಿತ್ರಕೂಟದಲ್ಲಿ)
ಸುಖಂ(ಸುಖವಾಗಿ)
ಅವಸತ್(ವಾಸಿಸಿದನು)
ಭಾವಾರ್ಥ:
ಗಂಗಾನದಿಯನ್ನು ದಾಟಿ ಗುಹನನ್ನು ಬೀಳ್ಕೊಂಡ ರಾಮನು ಭಾರದ್ವಾಜಮುನಿಗಳ ಆಶ್ರಮವನ್ನು ಸೇರಿದನು. ಅವರನ್ನು ವಂದಿಸಿ ಅವರ ಸತ್ಕಾರವನ್ನು ಸ್ವೀಕರಿಸಿದನು. ಮುಂದೆ ಅವರ ನಿರ್ದೇಶದಂತೆ ಚಿತ್ರಕೂಟವನ್ನು ಸೇರಿ ಅಲ್ಲಿ ಸುಖವಾಗಿ ವಾಸಿಸಿದನು.
ಅಯೋಧ್ಯಾಂ ತತೋ ಗತ್ವಾ ಸುಮಂತ್ರಃ ಶೋಕವಿಹ್ವಲಃ।
ರಾಜ್ಞೇ ನ್ಯವೇದಯತ್ಸರ್ವಂ ರಾಘವಸ್ಯ ವಿಚೇಷ್ಟಿತಮ್॥೨।೧೧॥
ಪದಚ್ಛೇದ:
ಅಯೋಧ್ಯಾಂ ತತಃ ಗತ್ವಾ ಸುಮಂತ್ರಃ ಶೋಕವಿಹ್ವಲಃ ।
ರಾಜ್ಞೇ ನ್ಯವೇದಯತ್ ಸರ್ವಂ ರಾಘವಸ್ಯ ವಿಚೇಷ್ಟಿತಮ್ ॥
ಅನ್ವಯ ಅರ್ಥ:
ತತಃ(ಅನಂತರ)
ಶೋಕವಿಹ್ವಲಃ (ದುಃಖತಪ್ತನಾದ)
ಸುಮಂತ್ರಃ(ಸುಮಂತ್ರನು)
ಅಯೋಧ್ಯಾಂ ಗತ್ವಾ (ಅಯೋಧ್ಯೆಗೆ ಹೋಗಿ)
ರಾಜ್ಞೇ (ರಾಜನಿಗೆ)
ರಾಘವಸ್ತಸ್ಯ (ರಾಮನ)
ಸರ್ವಂ ವಿಚೇಷ್ಟಿತಮ್ (ಎಲ್ಲಾ ನಡೆಗಳನ್ನು)
ನ್ಯವೇದಯತ್ (ನಿವೇದಿಸಿಕೊಂಡನು).
ಭಾವಾರ್ಥ:
ರಾಮನ ವನಗಮನವನ್ನು ಕಣ್ಣಾರೆ ಕಂಡ ಸುಮಂತ್ರನು ದುಃಖದಿಂದ ದಿಕ್ಕು ತೋಚದವನಾದನು. ಅಯೋಧ್ಯೆಗೆ ಮರಳಿ ರಾಜಾ ದಶರಥನಿಗೆ ಅಯೋಧ್ಯೆಯನ್ನು ತೊರೆದು ವನಪ್ರವೇಶದ ವರೆಗೆ ರಾಮನ ಎಲ್ಲಾ ನಡೆಗಳನ್ನು ಒಂದೂ ಬಿಡದೆ ನಿವೇದಿಸಿಕೊಂಡನು.
ತದಾಕರ್ಣ್ಯ ಸುಮಂತ್ರೋಕ್ತಂ ರಾಜಾ ದುಃಖಮೂಢಧೀಃ। ರಾಮರಾಮೇತಿ ವಿಲಪನ್ದೇಹಂ ತ್ಯಕ್ತ್ವಾ ದಿವಂ ಯಯೌ॥೨।೧೨॥
ಪದಚ್ಛೇದ:
ತತ್ ಆಕರ್ಣ್ಯ ಸುಮಂತ್ರೋಕ್ತಂ ರಾಜಾ ದುಃಖಮೂಢಧೀಃ ರಾಮರಾಮ ಇತಿ ವಿಲಪನ್ ದೇಹಂ ತ್ಯಕ್ತ್ವಾ ದಿವಂ ಯಯೌ॥
ಅನ್ವಯ ಅರ್ಥ:
ಸುಮಂತ್ರೋಕ್ತಂ (ಸುಮಂತ್ರನಿಂದ ಹೇಳಲ್ಪಟ್ಟ)
ತತ್(ಆ ವೃತ್ತಾಂತವನ್ನು)
ಆಕರ್ಣ್ಯ (ಕೇಳಿ)
ರಾಜಾ(ರಾಜನು)
ದುಃಖಮೂಢಧೀಃ (ಭೂತ್ವಾ )(ದುಃಖದಿಂದ ಮೂಢಮತಿಯಾಗಿ)
ರಾಮ ರಾಮ ಇತಿ (ರಾಮಾ ರಾಮಾ ಎಂದು)
ವಿಲಪನ್( ಪ್ರಲಾಪಿಸುತ್ತಾ)
ದೇಹಂ ತ್ಯಕ್ತ್ವಾ (ದೇಹವನ್ನು ತೊರೆದು)
ದಿವಂ ಯಯೌ(ಸ್ವರ್ಗವನ್ನು ಸೇರಿದನು)
ಭಾವಾರ್ಥ:
ಸುಮಂತ್ರನ ಮಾತುಗಳನ್ನು ಕೇಳಿ ರಾಜನು ದಿಕ್ಕು ತೋಚದವನಾದನು. ರಾಮಾ ರಾಮಾ ಎಂದು ಪ್ರಲಾಪಿಸುತ್ತಾ ದುಃಖದಿಂದ ದೇಹತ್ಯಾಗ ಮಾಡಿ ಸ್ವರ್ಗವನ್ನು ಸೇರಿದನು.
ಮಂತ್ರಿಣಸ್ತು ವಸಿಷ್ಠೋಕ್ತ್ಯಾ ದೇಹಂ ಸಂರಕ್ಷ್ಯ ಭೂಪತೇಃ। ದೂತೈರಾನಾಯನ್ಕ್ಷಿಪ್ರಂ ಭರತಂ ಮಾತುಲಾಲಯಾತ್॥೨।೧೩॥
ಪದಚ್ಛೇದ:
ಮಂತ್ರಿಣಃ ತು ವಸಿಷ್ಠೋಕ್ತ್ಯಾ ದೇಹಂ ಸಂರಕ್ಷ್ಯ ಭೂಪತೇ । ದೂತೈಃ ಆನಾಯಯನ್ ಕ್ಷಿಪ್ರಂ ಭರತಂ ಮಾತುಲಾಲಯಾತ್॥
ಅನ್ವಯ ಅರ್ಥ:
ವಸಿಷ್ಠೋಕ್ತ್ಯಾ (ವಸಿಷ್ಠರ ಮಾತಿನಂತೆ)
ಮಂತ್ರಿಣಃ (ಮಂತ್ರಿಗಳು)
ಭೂಪತೇಃ (ರಾಜನ)
ದೇಹಂ (ಶರೀರವನ್ನು)
ಸಂರಕ್ಷ್ಯ (ಸಂರಕ್ಷಿಸಿ)
ಭರತಂ (ಭರತನನ್ನು)
ಮಾತುಲಾಲಯಾತ್ (ಸೋದರಮಾವನ ಮನೆಯಿಂದ)
ಕ್ಷಿಪ್ರಂ (ತ್ವರಿತವಾಗಿ)
ದೂತೈಃ(ದೂತರ ಮೂಲಕ)
ಆನಾಯಯನ್ (ಕರೆಸಿಕೊಂಡರು)
ಭಾವಾರ್ಥ:
ಮಂತ್ರಿಗಳು ರಾಜನ ಪಾರ್ಥಿವಶರಿರವನ್ನು ತೈಲದ್ರೋಣಿಯಲ್ಲಿ ಸಂರಕ್ಷಿಸಿದರು. ರಾಜಗುರುಗಳಾದ ವಸಿಷ್ಠರ ಆದೇಶದಂತೆ ದೂತರನ್ನು ಕಳುಹಿಸಿ ತ್ವರಿತವಾಗಿ ಕೇಕಯದಿಂದ ಭರತನನ್ನು ಕರೆಸಿಕೊಂಡರು.
ಭರತಸ್ತು ಮೃತಂ ಶ್ರುತ್ವಾ ಪಿತರಂ ಕೈಕಯೀಗಿರಾ।
ಸಂಸ್ಕಾರಾದಿ ಚಕರಾಸ್ಯ ಯಥಾವಿಧಿ ಸಹಾನುಜಃ॥೨।೧೪॥
ಪದಚ್ಛೇದ:
ಭರತಃ ತು ಮೃತಂ ಶ್ರುತ್ವಾ ಪಿತರಂ ಕೈಕಯೀಗಿರಾ ಸಂಸ್ಕಾರಾದಿ ಚಕಾರ ಅಸ್ಯ ಯಥಾವಿಧಿ ಸಹಾನುಜಃ ।
ಅನ್ವಯ ಅರ್ಥ:
ಕೈಕಯೀಗಿರಾ(ಕೈಕೇಯಿಯ ಮಾತಿನಿಂದ)
ಪಿತರಂ ಮೃತಂ (ತಂದೆಯು ಮೃತನಾದುದನ್ನು)
ಶ್ರುತ್ವಾ (ಕೇಳಿ)
ಭರತಃ(ಭರತನು)
ಸಹಾನುಜಃ (ತಮ್ಮನೊಂದಿಗೆ)
ಅಸ್ಯ(ಅವನ)
ಸಂಸ್ಕಾರಾದಿ(ಉತ್ತರಕ್ರಿಯಾದಿಗಳನ್ನು)
ಚಕಾರ (ಮಾಡಿದನು)
ಭಾವಾರ್ಥ:
ತನ್ನ ತಾಯಿಯ ಮಾತುಗಳಿಂದಲೇ ತಂದೆಯು ತೀರಿಕೊಂಡನು ಎಂದರಿತ ಭರತನು ಬಹಳವಾಗಿ ನೊಂದುಕೊಂಡನು. ಕರ್ತವ್ಯದ ದೃಷ್ಟಿಯಿಂದ ತಮ್ಮನೊಡಗೂಡಿ ತಂದೆಯ ಔರ್ಧ್ವದೇಹಿಕಕ್ರಿಯೆ ವಿಧಿವತ್ತಾಗಿ ಪೂರಯಿಸಿದನು.
ಅಮಾತ್ಯೈಶ್ಚೋದ್ಯಮಾನೋಽಪಿ ರಾಜ್ಯಾಯ ಭರತಸ್ತದಾ। ವನಾಯೈವ ಯಯೌ ರಾಮಮಾನೇತುಂ ನಾಗರೈಃ ಸಹ॥೨।೧೫॥
ಪದಚ್ಛೇದ:
ಅಮಾತ್ಯೈಃ ಚೋದ್ಯಮಾನಃ ಅಪಿ ರಾಜ್ಯಾಯ ಭರತಃ ತದಾ। ವನಾಯ ಏವ ಯಯೌ ರಾಮಮ್ ಆನೇತುಂ ನಾಗರೈಃ ಸಹ॥
ಅನ್ವಯ ಅರ್ಥ:
ಅಮಾತ್ಯೈಃ (ಮಂತ್ರಿಗಳಿಂದ)
ಚೋದ್ಯಮಾನಃ ಅಪಿ (ಪ್ರಚೋದಿಸಲ್ಪಟ್ಟರೂ)
ಭರತಃ (ಭರತನು)
ರಾಜ್ಯಾಯ (ರಾಜ್ಯಕ್ಕಾಗಿ)
ರಾಮಂ (ರಾಮನನ್ನು)
ಆನೇತುಂ(ಕರೆತರಲು)
ನಾಗರೈಃ ಸಹ(ನಾಗರಿಕರೊಂದಿಗೆ)
ವನಂ ಏವ ಯಯೌ (ಕಾಡಿಗೇ ಹೋದನು).
ಭಾವಾರ್ಥ:
ರಾಮನ ಇಚ್ಛೆಯಂತೆ ರಾಜ್ಯವನ್ನು ಸ್ವೀಕರಿಸೆಂದು ಅಮಾತ್ಯರು ಒತ್ತಾಯಿಸಿದರೂ ಒಲ್ಲೆನೆಂದ ಭರತನು ರಾಜ್ಯಾಭಿಷೇಕಕ್ಕಾಗಿ ರಾಮನನ್ನೇ ಕರೆತರುವೆನೆಂದು ಪುರಜನರೊಂದಿಗೆ ಕಾಡಿಗೆ ತೆರಳಿದನು.
ಸ ಗತ್ವಾ ಚಿತ್ರಕೂಟಸ್ಥಂ ರಾಮಂ ಚೀರ ಜಠಾಧರಮ್। ಯಯಾಚೇ ರಕ್ಷಿತುಂ ರಾಜ್ಯಂ ವಸಿಷ್ಠಾದ್ಯೈರ್ದ್ವಿಜೈಃ ಸಹ॥೨।೧೬॥
ಪದಚ್ಛೇದ:
ಸಃ ಗತ್ವಾ ಚಿತ್ರಕೂಟಸ್ಥಂ ರಾಮಂ ಚೀರಜಠಾಧರಮ್ ಯಯಾಚೇ ರಕ್ಷಿತುಂ ರಾಜ್ಯಂ ವಸಿಷ್ಠಾದ್ಯೈಃ ದ್ವಿಜೈಃ ಸಹ॥
ಅನ್ವಯ ಅರ್ಥ:
ಸಃ(ಅವನು)
ವಸಿಷ್ಠಾದ್ಯೈಃ(ವಸಿಷ್ಠರೇ ಮೊದಲಾದ )
ದ್ವಿಜೈಃ ಸಹ(ಬ್ರಾಹ್ಮಣರೊಡನೆ) ಚಿತ್ರಕೂಟಸ್ಥಂ(ಚಿತ್ರಕೂಟದಲ್ಲಿದ್ದ) ಚೀರಜಠಾಧರಮ್(ನಾರುಮಡಿಯುಟ್ಟು ಜಠಾಧಾರಿಯಾಗಿದ್ದ) ರಾಮಂ ( ರಾಮನ ಬಳಿಗೆ)
ಗತ್ವಾ (ಹೋಗಿ)
ರಾಜ್ಯಂ (ರಾಜ್ಯವನ್ನು )
ರಕ್ಷಿತುಂ (ಪರಿಪಾಲಿಸಲು)
ಯಯಾಚೇ (ಬೇಡಿಕೊಂಡನು)
ಭಾವಾರ್ಥ:
ಗುರುಗಳಾದ ವಸಿಷ್ಠರನ್ನೂ ಹಿರಿಯ ಋಷಿಮುನಿಗಳನ್ನೂ ಮುಂದಿಟ್ಟುಕೊಂಡು ಭರತನು ರಾಮನಿದ್ದ ಚಿತ್ರಕೂಟವನ್ನು ಸೇರಿದನು. ರಾಜ್ಯವನ್ನು ತ್ಯಜಿಸಿ ನಾರುಮಡಿಯುಟ್ಟು ಜಠಾಧಾರಿಯಾಗಿದ್ದ ರಾಮನನ್ನು ವನವಾಸವನ್ನು ತ್ಯಜಿಸಿ ರಾಜ್ಯವನ್ನು ಸ್ವೀಕರಿಸೆಂದು ಬೇಡಿಕೊಂಡನು.
ಚತುರ್ದಶಸಮಾ ನೀತ್ವಾ ಪುನರೇಷ್ಯಾಮ್ಯಹಂ ಪುರೀಮ್। ಇತ್ಯುಕ್ತ್ವಾ ಪಾದುಕೇ ದತ್ವಾ ತಂ ರಾಮಃ ಪ್ರತ್ಯಯಾಪಯತ್ ॥೨।೧೭॥
ಪದಚ್ಛೇದ:
ಚತುರ್ದಶಸಮಾಃ ನೀತ್ವಾ ಪುನಃ ಏಷ್ಯಾಮಿ ಅಹಂ ಪುರೀಮ್। ಇತಿ ಉಕ್ತ್ವಾ ಪಾದುಕೇ ದತ್ವಾ ತಂ ರಾಮಃ ಪ್ರತ್ಯಯಾಪಯತ್ ।
ಭಾವಾರ್ಥ:
ಚತುರ್ದಶಸಮಾಃ (ಹದಿನಾಲ್ಕು ವರ್ಷ)
ನೀತ್ವಾ (ಕಳೆದು)
ಅಹಂ(ನಾನು)
ಪುರೀಮ್ (ನಗರಕ್ಕೆ)
ಏಷ್ಯಾಮಿ (ಬರುವೆನು)
ಇತಿ ಉಕ್ತ್ವಾ (ಹೀಗೆ ಹೇಳಿ)
ಪಾದುಕೇ (ಪಾದುಕೆಗಳನ್ನು)
ದತ್ವಾ (ನೀಡಿ)
ತಂ (ಅವನನ್ನು )
ರಾಮಃ(ರಾಮನು)
ಪ್ರತ್ಯಯಾಪಯತ್(ಹಿಂದಿರುಗಿ ಕಳುಹಿಸಿದನು).
ಭಾವಾರ್ಥ:
ಪಿತೃವಾಕ್ಯಪರಿಪಾಲಕನಾದ ರಾಮನು ಭರತನ ಮಾತಿಗೆ ಒಡಂಬಡದೆ ಹದಿನಾಲ್ಕು ವರ್ಷ ಕಳೆದು ನಗರಕ್ಕೆ ಬರುವೆನು ಎಂದು ವಚನವಿತ್ತನು. ಪಾದುಕೆಗಳನ್ನು ಇತ್ತು ತನ್ನ ಪ್ರತಿನಿಧಿಯಾಗಿ ರಾಜ್ಯವಾಳುವಂತೆ ಭರತನನ್ನು ಒಡಂಬಡಿಸಿ ಅಯೋಧ್ಯೆಗೆ ಹಿಂದಿರುಗಿ ಕಳುಹಿಸಿದನು.
ಗೃಹೀತ್ವಾ ಪಾದುಕೇ ತಸ್ಮಾದ್ಭರತೋ ದೀನಮಾನಸಃ। ನಂದಿಗ್ರಾಮೇ ಸ್ಥಿತಸ್ತಾಭ್ಯಾಂ ರರಕ್ಷ ಚ ವಸುಂಧರಾಮ್॥೨।೧೮॥
ಪದಚ್ಛೇದ:
ಗೃಹೀತ್ವಾ ಪಾದುಕೇ ತಸ್ಮಾತ್ ಭರತಃ ದೀನಮಾನಸಃ ನಂದಿಗ್ರಾಮೇ ಸ್ಥಿತಃ ತಾಭ್ಯಾಮ್ ರರಕ್ಷ ಚ ವಸುಂಧರಾಮ್॥
ಅನ್ವಯ ಅರ್ಥ:
ಭರತಃ (ಭರತನು)
ತಸ್ಮಾತ್(ಅವನಿಂದ)
ಪಾದುಕೇ (ಪಾದುಕೆಗಳನ್ನು)
ಗೃಹೀತ್ವಾ(ಪಡೆದು)
ದೀನಮಾನಸಃ(ದುಃಖದಿಂದ ಕೂಡಿದ ಮನಸ್ಸುಳ್ಳವನಾಗಿ) ನಂದಿಗ್ರಾಮೇ (ನಂದಿಗ್ರಾಮದಲ್ಲಿ)
ಸ್ಥಿತಃ (ನೆಲೆಸಿದನು). ತಾಭ್ಯಾಮ್ (ಅವುಗಳಿಂದ) ವಸುಂಧರಾಂ(ಭೂಮಿಯನ್ನು) ರರಕ್ಷ (ಪಾಲಿಸಿದನು) ಭಾವಾರ್ಥ: ಬೇರೆ ಉಪಾಯವಿಲ್ಲದೆ ಭರತನು ರಾಮನಿಂದ ಪಾದುಕೆಗಳನ್ನು ಸ್ವೀಕರಿಸಿದನು. ದುಃಖದಿಂದ ನಂದಿಗ್ರಾಮವನ್ನು ಸೇರಿ ಅಲ್ಲಿಯೇ ನೆಲೆಸಿದನು. ಪಾದುಕೆಗಳಲ್ಲೇ ರಾಮನ ಶ್ರೀಚರಣಗಳನ್ನು ಕಾಣುತ್ತಾ ಅವುಗಳ ಮೂಲಕವೇ ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡಿದನು.
ರಾಘವಸ್ತು ಗಿರೇಸ್ತಸ್ಮಾದ್ಗತ್ವಾಽತ್ರಿಂ ಸಮವಂದತ।
ತತ್ಪತ್ನೀ ತು ತದಾ ಸೀತಾಂ ಭೂಷಣೈಃ ಸ್ವೈರಭೂಷಯತ್॥೨।೧೯॥
ಪದಚ್ಛೇದ:
ರಾಘವಃ ತು ಗಿರೇಃ ತಸ್ಮಾತ್ ಗತ್ವಾ ಅತ್ರಿಂ ಸಮವಂದತ। ತತ್ಪತ್ನೀ ತು ತದಾ ಸೀತಾಂ ಭೂಷಣೈಃ ಸ್ವೈಃ ಅಭೂಷಯತ್ ॥
ಅನ್ವಯ ಅರ್ಥ:
ರಾಘವಃ (ರಾಮನು)
ತಸ್ಮಾತ್ ಗಿರೇಃ (ಆ ಪರ್ವತದಿಂದ)
ಗತ್ವಾ (ಹೊರಟು)
ಅತ್ರಿಂ (ಅತ್ರಿಮಹರ್ಷಿಗಳಲ್ಲಿಗೆ ಹೋಗಿ) ಸಮವಂದತ(ವಂದಿಸಿದನು)
ತದಾ (ಆಗ)
ತತ್ಪತ್ನೀ (ಅವರ ಪತ್ನಿಯು)
ಸ್ವೈಃ(ತಮ್ಮ)
ಭೂಷಣೈಃ (ಆಭರಣಗಳಿಂದ)
ಸೀತಾಂ(ಸೀತೆಯನ್ನು)
ಅಭೂಷಯತ್(ಅಲಂಕರಿಸಿದಳು)
ಭಾವಾರ್ಥ:
ಭರತನ ನಿರ್ಗಮನಾನಂತರ ರಾಮನು ಚಿತ್ರಕೂಟ ಪರ್ವತವನ್ನು ತೊರೆದು ಅತ್ರಿಮುನೀಂದ್ರರ ಆಶ್ರಮಕ್ಕೆ ತೆರಳಿ ಆತನನ್ನು ವಂದಿಸಿದನು. ಅಸೂಯಾರಹಿತಳಾದ ಅವರ ಪತ್ನಿ ಅನಸೂಯೆಯು ಸೀತೆಗೆ ತನ್ನಲ್ಲಿದ್ದ ದೇವತಾಸಂಬಂಧವುಳ್ಳ ದಿವ್ಯವಾದ ಎಂದಿಗೂ ಮಾಸದ ಮಲಿನವಾಗದ ಹಾರ ವಜ್ರಾಭರಣ ಅಂಗರಾಗಾದಿಗಳನ್ನು ನೀಡಿ ಅಲಂಕರಿಸಿದಳು.
ಉಷಿತ್ವಾ ತು ನಿಶಾಮೇಕಾಮೇಕಾಮಾಶ್ರಮೇ ತಸ್ಯ ರಾಘವಃ। ವಿವೇಶ ದಂಡಕಾರಣ್ಯೇ ಸೀತಾಲಕ್ಷ್ಮಣಸಂಯುತಃ॥೨।೨೦॥
ಪದಚ್ಛೇದ:
ಉಷಿತ್ವಾ ತು ನಿಶಾಮ್ ಏಕಾಮ್ ಆಶ್ರಮೇ ತಸ್ಯ ರಾಘವಃ ವಿವೇಶ ದಂಡಕಾರಣ್ಯೇ ಸೀತಾಲಕ್ಷ್ಮಣಸಂಯುತಃ।
ಅನ್ವಯ ಅರ್ಥ:
ರಾಘವಃ(ರಾಮನು)
ತಸ್ಯ ಆಶ್ರಮೇ(ಅವರ ಆಶ್ರಮದಲ್ಲಿ)
ಏಕಾಂ ನಿಶಾಂ(ಒಂದು ರಾತ್ರಿಯನ್ನು)
ಉಷಿತ್ವಾ (ಕಳೆದು) ಸೀತಾಲಕ್ಷ್ಮಣಸಂಯುತಃ(ಸೀತಾಲಕ್ಷ್ಮಣರೊಡಗೂಡಿ) ದಂಡಕಾರಣ್ಯೇ (ದಂಡಕಾರಣ್ಯದಲ್ಲಿ)
ವಿವೇಶ(ಸೇರಿಕೊಂಡನು).
ಭಾವಾರ್ಥ:
ರಾಮನು ಅವರ ಆಶ್ರಮದಲ್ಲಿ ಒಂದು ರಾತ್ರಿ ತಂಗಿದ್ದು ಮರುದಿನ ಸೀತಾಲಕ್ಷ್ಮಣರೊಂದಿಗೆ ದಂಡಕಾರಣ್ಯವನ್ನು ಸೇರಿಕೊಂಡನು.
ಇತಿ ಶ್ರೀರಾಮೋದಂತೇ ಅಯೋಧ್ಯಾಕಾಂಡಃ ಸಮಾಪ್ತಃ
ಇಲ್ಲಿಗೆ ಶ್ರೀರಾಮೋದಂತದ ಅಯೋಧ್ಯಾಕಾಂಡವು ಮುಗಿದುದು
॥ರಾಮಂ ಭಜೇ ಶ್ಯಾಮಲಮ್॥

Comments
Post a Comment