Posts

ಅರಣ್ಯಕಾಂಡಃ

॥ಅಥ ಅರಣ್ಯಕಾಂಡಃ॥  ವ್ರಜನ್ವನೇನ ಕಾಕುತ್ಸ್ಥೋ ವಿರಾಧಂ ವಿಧಿಚೋದಿತಮ್। ಸದಾರಾನುಜಮಾತ್ಮಾನಂ ಹರಂತಮವಧೀತ್ತದಾ॥೩।೧॥  ಪದಚ್ಛೇದ: ವ್ರಜನ್ ವನೇನ ಕಾಕುತ್ಸ್ಥಃ ವಿರಾಧಂ ವಿಧಿಚೋದಿತಮ್ ಸದಾರಾನುಜಂ ಆತ್ಮಾನಂ ಹರಂತಮ್ ಅವಧೀತ್ ತದಾ ॥ ಅನ್ವಯ ಅರ್ಥ: ವನೇನ (ಕಾಡಿನಿಂದ ಕಾಡಿಗೆ) ವ್ರಜನ್ (ಅಲೆದಾಡುತ್ತಾ) ಕಾಕುತ್ಸ್ಥಃ (ರಾಮನು) ಸದಾರಾನುಜಮ್(ಪತ್ನಿ ಮತ್ತು ಸೋದರನಿಂದೊಡಗೂಡಿದ) ಆತ್ಮಾನಂ (ತನ್ನನ್ನು) ವಿಧಿಚೋದಿತಮ್ (ವಿಧಿಯಿಂದ ಪ್ರಚೋದಿಸಲ್ಪಟ್ಟು) ಹರಂತಮ್ (ಕೊಲ್ಲುತ್ತಿದ್ದ) ವಿರಾಧಂ(ವಿರಾಧನನ್ನು) ಅವಧೀತ್(ವಧಿಸಿದನು). ಭಾವಾರ್ಥ: ದಂಡಕಾರಣ್ಯದಲ್ಲಿ ಸೀತಾಲಕ್ಷ್ಮಣರೊಂದಿಗೆ ಅಲೆದಾಡುತ್ತಿದ್ದ ರಾಮನನ್ನು ವಿರಾಧನೆಂಬ ರಾಕ್ಷಸನು ಅಡ್ಡಗಟ್ಟಿದನು. ವಿಧಿಯಿಂದ ಪ್ರೇರಿತನಾಗಿ ಆ ಮೂವರನ್ನೂ ಕೊಲ್ಲಲನುವಾದನು. ಸರ್ವಜೀವಪೀಡಕನಾದ ಆತನು ಆಯುಧಗಳಿಂದ ಅವಧ್ಯನು. ರಾಮನು ಆತನ ಕಂಠಪ್ರದೇಶದಲ್ಲಿ ಮೆಟ್ಟಿ ಕುಣಿಯಲ್ಲಿ ಹೂತು ವಧಿಸಿದನು. ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ। ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿರರ್ಚಿತಃ ॥೩।೨॥ ಪದಚ್ಛೇದ: ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿಃ ಅರ್ಚಿತಃ ॥ ಅನ್ವಯ ಅರ್ಥ: ಸಃ(ಅವನು) ಶರಭಂಗಾಶ್ರಮಂ ಗತ್ವಾ (ಶರಭಂಗಾಶ್ರಮಕ್ಕೆ ಹೋಗಿ) ತಸ್ಯ (ಅವರ) ಸ್ವರ್ಗತಿಂ (ಸ್ವರ್ಗಾರೋಹಣವನ್ನು) ವೀಕ್ಷ್ಯ (ನೋಡಿ) ಮುನಿಭಿಃ ...
॥ಅಥ ಅಯೋಧ್ಯಾಕಾಂಡಃ॥ ಏತಸ್ಮಿನ್ನಂತರೇ ಗೇಹಂ ಮಾತುಲಸ್ಯ ಯುಧಾಜಿತಃ। ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥೨।೧॥  ಪದಚ್ಛೇದ: ಏತಸ್ಮಿನ್ ಅಂತರೇ ಗೇಹಂ ಮಾತುಲಸ್ಯ ಯುಧಾಜಿತಃ ಪ್ರಯಯೌ ಭರತಃ ಪ್ರೀತಃ ಶತ್ರುಘ್ನೇನ ಸಮನ್ವಿತಃ॥  ಅನ್ವಯ ಅರ್ಥ:  ಏತಸ್ಮಿನ್ ಅಂತರೇ (ಇದೇ ಸಮಯದಲ್ಲಿ)  ಪ್ರೀತಃ ಭರತಃ (ಪ್ರೀತಿ ತುಂಬಿದ ಭರತನು)   ಶತ್ರುಘ್ನೇನ ಸಮನ್ವಿತಃ (ಶತ್ರುಘ್ನನನ್ನು ಕೂಡಿಕೊಂಡು) ಮಾತುಲಸ್ಯ (ಸೋದರಮಾವನಾದ) ಯುಧಾಜಿತಃ(ಯುಧಾಜಿತನ)  ಗೇಹಂ (ಮನೆಗೆ) ಪ್ರಯಯೌ (ಹೋದನು)  ಭಾವಾರ್ಥ:  ವಿವಾಹಾನಂತರ ಅಯೋಧ್ಯೆಯಲ್ಲಿ ಎಲ್ಲರೂ ಸುಖವಾಗಿರುವ ಸಮಯದಲ್ಲಿ ಪ್ರೀತಿ ತುಂಬಿದ ಭರತನು ಸೋದರಮಾವನಾದ ಯುಧಾಜಿತನ ಮನೆಗೆ ಹೋದನು.  ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸ ಭೂಪತಿಃ। ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥೨।೨॥  ಪದಚ್ಛೇದ:  ತತಃ ಪ್ರಕೃತಿಭಿಃ ಸಾಕಂ ಮಂತ್ರಯಿತ್ವಾ ಸಃ ಭೂಪತಿಃ।  ಅಭಿಷೇಕಾಯ ರಾಮಸ್ಯ ಸಮಾರೇಭೇ ಮುದಾನ್ವಿತಃ॥  ಅನ್ವಯ ಅರ್ಥ:  ತತಃ (ಆಗ)  ಪ್ರಕತಿಭಿಃ ಸಾಕಂ(ಪೌರಶ್ರೇಷ್ಠರೊಂದಿಗೆ) ಮಂತ್ರಯಿತ್ವಾ (ಸಮಾಲೋಚಿಸಿ) ಸಃ ಭೂಪತಿಃ (ಆ ರಾಜನು) ಮುದಾನ್ವಿತಃ(ಸಂತಸದಿಂದ ಕೂಡಿದವನಾಗಿ)  ರಾಮಸ್ಯ (ರಾಮನ) ಅಭಿಷೇಕಾಯ(ಅಭಿಷೇಕಕ್ಕೆ)  ಸಮಾರೇಭೇ(ಅಣಿಯಾದನು)  ಭ...

ಶ್ರೀರಾಮೋದಂತಮ್

 ಸಂ: ಡಾ| ಕೆ.ಎಮ್.ಭಟ್ ಪುಣಚ   ಶ್ರೀರಾಮೋದಂತಮ್ ಇದು ರಾಮಾಯಣದ ಒಂದು ಸಂಕ್ಷಿಪ್ತ ರೂಪ. ಉದಂತ ಎಂದರೆ ವೃತ್ತಾಂತ. ಶ್ರೀರಾಮನ ಕಥನವನ್ನು ಚಿಕ್ಕದಾಗಿ ಆಖ್ಯಾನ ಮಾಡುವ ಒಂದು ಪುಟ್ಟ ಕಾವ್ಯ ಇದು. ರಾಮಾಯಣವು ಮಹಾನ್ ಕಾವ್ಯವಾದರೂ ತುಂಬಾ ಸರಳವಾಗಿದ್ದು ಸುಲಭವಾಗಿ ಅರ್ಥವಾಗುವಂತಿದೆ. ಮಹಾಭಾರತವೇ ಮೊದಲಾದ ಕಾವ್ಯಗಳಂತೆ ಕಠಿಣವಲ್ಲ. ಶ್ರೀರಾಮೋದಂತ ಅದಕ್ಕಿಂತಲೂ ಸರಳವಾಗಿದೆ. ಬರೆದವರು ಯಾರೆಂಬುದು ನಿಖರವಾಗಿ ತಿಳಿದಿಲ್ಲ ಪರಮೇಶ್ವರಕವಿವಿರಚಿತವೆಂದು ಪ್ರಚಲಿತವಿದೆ. ಕವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಿಂದಿನ ಕಾಲದಲ್ಲಿ ಸಂಸ್ಕೃತಾಭ್ಯಾಸಿಗಳು ವರ್ಣಮಾಲೆ ಕಲಿತಕೂಡಲೇ ಶ್ರೀರಾಮೋದಂತಂ ಮತ್ತು ಅಮರಕೋಶವನ್ನು ಕಂಠಸ್ಥ ಮಾಡಿಕೊಳ್ಳುವುದು ರೂಢಿಯಾಗಿತ್ತು. ವಾಲ್ಮೀಕಿವಿರಚಿತ ಮೂಲ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿವೆ. ಅದನ್ನು ಸಂಕ್ಷಿಪ್ತಗೊಳಿಸಿ ಸಂಗ್ರಹರೂಪವಾಗಿ ಕೇವಲ ಸುಮಾರು ಇನ್ನೂರು ಶ್ಲೋಕಗಳಲ್ಲಿ ಶ್ರೀರಾಮೋದಂತಮ್ ಎಂಬ ಚುಟುಕು ರಾಮಾಯಣ ಕಾವ್ಯವನ್ನು ರಚಿಸಲಾಗಿದೆ. ಈ ಸರಳ ಸುಂದರ ಕಾವ್ಯವನ್ನು ಯಥಾಮತಿ ಅರಗಿಸಿಕೊಂಡು ಶ್ರೀರಾಮನ ಕೃಪೆಗೆ ಪಾತ್ರರಾಗೋಣ.  ॥ಶ್ರೀರಾಮೋದಂತಮ್॥  ।ಅಥ ಬಾಲಕಾಂಡಃ।   ಶ್ರೀಪತಿಂ ಪ್ರಣಿಪತ್ಯಾಹಂ ಶ್ರೀವತ್ಸಾಂಕಿತವಕ್ಷಸಮ್। ಶ್ರೀರಾಮೋದಂತಮಾಖ್ಯಾಸ್ಯೇ ಶ್ರೀವಾಲ್ಮೀಕಿಪ್ರಕೀರ್ತಿತಮ್ ॥೧।೧॥  ಪದಚ್ಛೇದ:  ಶ್ರೀಪತಿಂ ಪ್ರಣಿಪ...