ಅರಣ್ಯಕಾಂಡಃ
॥ಅಥ ಅರಣ್ಯಕಾಂಡಃ॥
ವ್ರಜನ್ವನೇನ ಕಾಕುತ್ಸ್ಥೋ ವಿರಾಧಂ ವಿಧಿಚೋದಿತಮ್। ಸದಾರಾನುಜಮಾತ್ಮಾನಂ ಹರಂತಮವಧೀತ್ತದಾ॥೩।೧॥
ಪದಚ್ಛೇದ: ವ್ರಜನ್ ವನೇನ ಕಾಕುತ್ಸ್ಥಃ ವಿರಾಧಂ ವಿಧಿಚೋದಿತಮ್ ಸದಾರಾನುಜಂ ಆತ್ಮಾನಂ ಹರಂತಮ್ ಅವಧೀತ್ ತದಾ ॥ ಅನ್ವಯ ಅರ್ಥ: ವನೇನ (ಕಾಡಿನಿಂದ ಕಾಡಿಗೆ) ವ್ರಜನ್ (ಅಲೆದಾಡುತ್ತಾ) ಕಾಕುತ್ಸ್ಥಃ (ರಾಮನು) ಸದಾರಾನುಜಮ್(ಪತ್ನಿ ಮತ್ತು ಸೋದರನಿಂದೊಡಗೂಡಿದ) ಆತ್ಮಾನಂ (ತನ್ನನ್ನು) ವಿಧಿಚೋದಿತಮ್ (ವಿಧಿಯಿಂದ ಪ್ರಚೋದಿಸಲ್ಪಟ್ಟು) ಹರಂತಮ್ (ಕೊಲ್ಲುತ್ತಿದ್ದ) ವಿರಾಧಂ(ವಿರಾಧನನ್ನು) ಅವಧೀತ್(ವಧಿಸಿದನು). ಭಾವಾರ್ಥ: ದಂಡಕಾರಣ್ಯದಲ್ಲಿ ಸೀತಾಲಕ್ಷ್ಮಣರೊಂದಿಗೆ ಅಲೆದಾಡುತ್ತಿದ್ದ ರಾಮನನ್ನು ವಿರಾಧನೆಂಬ ರಾಕ್ಷಸನು ಅಡ್ಡಗಟ್ಟಿದನು. ವಿಧಿಯಿಂದ ಪ್ರೇರಿತನಾಗಿ ಆ ಮೂವರನ್ನೂ ಕೊಲ್ಲಲನುವಾದನು. ಸರ್ವಜೀವಪೀಡಕನಾದ ಆತನು ಆಯುಧಗಳಿಂದ ಅವಧ್ಯನು. ರಾಮನು ಆತನ ಕಂಠಪ್ರದೇಶದಲ್ಲಿ ಮೆಟ್ಟಿ ಕುಣಿಯಲ್ಲಿ ಹೂತು ವಧಿಸಿದನು. ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ। ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿರರ್ಚಿತಃ ॥೩।೨॥ ಪದಚ್ಛೇದ: ಶರಭಂಗಾಶ್ರಮಂ ಗತ್ವಾ ಸ್ವರ್ಗತಿಂ ವೀಕ್ಷ್ಯ ತಸ್ಯ ಸಃ ಪ್ರತಿಜಜ್ಞೇ ರಾಕ್ಷಸಾನಾಂ ವಧಂ ಮುನಿಭಿಃ ಅರ್ಚಿತಃ ॥ ಅನ್ವಯ ಅರ್ಥ: ಸಃ(ಅವನು) ಶರಭಂಗಾಶ್ರಮಂ ಗತ್ವಾ (ಶರಭಂಗಾಶ್ರಮಕ್ಕೆ ಹೋಗಿ) ತಸ್ಯ (ಅವರ) ಸ್ವರ್ಗತಿಂ (ಸ್ವರ್ಗಾರೋಹಣವನ್ನು) ವೀಕ್ಷ್ಯ (ನೋಡಿ) ಮುನಿಭಿಃ (ಮುನಿಗಳಿಂದ) ಅರ್ಚಿತಃ (ಪೂಜಿಸಲ್ಪಟ್ಟು) ರಾಕ್ಷಸಾನಾಂ (ರಾಕ್ಷಸರ) ವಧಂ (ವಧೆಯನ್ನು ಕುರಿತು) ಪ್ರತಿಜಜ್ಞೇ (ಪ್ರತಿಜ್ಞೆ ಮಾಡಿದನು) ಭಾವಾರ್ಥ: ವಿರಾಧನ ಸೂಚನೆಯಂತೆ ರಾಮನು ಶರಭಂಗಾಶ್ರಮಕ್ಕೆ ಹೋದನು. ಉಗ್ರತಪಸ್ಸಿನಿಂದ ಆತ್ಮಜ್ಞಾನ ಪಡೆಯದವರಿಗೆ ಅಲಭ್ಯವಾದ ಬ್ರಹ್ಮಲೋಕವನ್ನೇ ಸಾಧಿಸಿದ್ದರೂ ರಾಮದರ್ಶನವಾಗದೆ ಬ್ರಹ್ಮಲೋಕವನ್ನೂ ಇಷ್ಟಪಡದ ಶರಭಂಗರ ಪಾದಗಳನ್ನು ಹಿಡುದು ನಮಿಸಿದನು. ಹೋಮಾಗ್ನಿಯನ್ನು ಪ್ರವೇಶಿಸಿ ಜೀರ್ಣಶರೀರವನ್ನು ತ್ಯಜಿಸಿ ಕುಮಾರರೂಪದಿಂದ ಮುನಿಯು ದೇವಲೋಕವನ್ನು ಹಾದು ಬ್ರಹ್ಮಲೋಕವನ್ನು ಸೇರುವುದನ್ನು ಕಂಡನು. ನಂತರ ಮುನಿಗಳಿಂದ ಪೂಜಿಸಲ್ಪಟ್ಟ ರಾಮನು ಲೋಕಕಂಟಕರಾದ ರಾಕ್ಷಸರನ್ನು ವಧಿಸುವುದಾಗಿ ಪ್ರತಿಜ್ಞೆ ಮಾಡಿದನು. ತಸ್ಮಾದ್ಗತ್ವಾ ಸುತೀಕ್ಷ್ಣಂ ಚ ಪ್ರಣಮ್ಯಾನೇನ ಪೂಜಿತಃ । ಅಗಸ್ತ್ಯಾಶ್ರಮಂ ಪ್ರಾಪ್ಯ ತಂ ನನಾಮ ರಘೂತ್ತಮಃ॥೩।೩॥ ಪದಚ್ಛೇದ: ತಸ್ಮಾತ್ ಗತ್ವಾ ಸುತೀಕ್ಷ್ಣಂ ಚ ಪ್ರಣಮ್ಯ ಅನ್ನ ಪೂಜಿತಃ ಅಗಸ್ತ್ಯಾಶ್ರಮಂ ಪ್ರಾಪ್ಯ ತಂ ನನಾಮ ರಘೂತ್ತಮಃ ॥ ಅನ್ವಯ ಅರ್ಥ: ತಸ್ಮಾತ್ (ಅಲ್ಲಿಂದ) ಸುತೀಕ್ಷ್ಣಂ (ಸುತೀಕ್ಷ್ಣರಲ್ಲಿಗೆ) ಗತ್ವಾ (ಹೋಗಿ) ಪ್ರಣಮ್ಯ (ನಮಸ್ಕರಿಸಿ) ಅನೇನ(ಅವರಿಂದ) ಪೂಜಿತಃ (ಪೂಜಿಸಲ್ಪಟ್ಟ) ರಘೂತ್ತಮಃ (ರಘವಂಶಶ್ರೇಷ್ಠನು) ಅಗಸ್ತ್ಯಾಶ್ರಮಂ (ಅಗಸ್ತ್ಯರ ಆಶ್ರಮವನ್ನು ) ಪ್ರಾಪ್ಯ (ಸೇರಿ) ತಂ( ಅವರನ್ನು ) ನನಾಮ(ನಮಿಸಿದನು) ಭಾವಾರ್ಥ: ಶರಭಂಗರ ಸೂಚನೆಯಂತೆ ರಘುಕುಲತಿಲಕನಾದ ರಾಮಚಂದ್ರನು ಮಂದಾಕಿನಿಯನ್ನು ಅನುಸರಿಸಿ ಸುತೀಕ್ಷ್ಣರ ಆಶ್ರಮವನ್ನು ಸೇರಿದನು. ಅವರನ್ನು ನಮಿಸಿ ಅವರ ಪೂಜೆಯನ್ನು ಸ್ವೀಕರಿಸಿ ಅಗಸ್ತ್ಯಾಶ್ರಮವನ್ನು ಸೇರಿ ಅವರನ್ನು ನಮಿಸಿದನು. ರಾಮಾಯ ವೈಷ್ಣವಂ ಚಾಪಮೈಂದ್ರಂ ತೂಣೀಯುಗಂ ತಥಾ। ಬ್ರಾಹ್ಮಂ ಚಾಸ್ತ್ರಂ ಚ ಖಡ್ಗಂ ಚ ಪ್ರದದೌ ಕುಂಭಸಂಭವಃ ॥೩।೪॥ ಪದಚ್ಛೇದ: ರಾಮಾಯ ವೈಷ್ಣವಂ ಚಾಪಂ ಐಂದ್ರಂ ತೂಣೀಯುಗಂ ತಥಾ । ಬ್ರಾಹ್ಮಂ ಚ ಅಸ್ತ್ರಂ ಚ ಖಡ್ಗಂ ಚ ಪ್ರದದೌ ಕುಂಭಸಂಭವಃ॥ ಅನ್ವಯ ಅರ್ಥ: ಕುಂಭಸಂಭವಃ(ಅಗಸ್ತ್ಯರು) ರಾಮಾಯ(ರಾಮನಿಗೆ) ವೈಷ್ಣವಂ ಚಾಪಂ(ವೈಷ್ಣವ ಧನುಸ್ಸನ್ನು) ತಥಾ (ಹಾಗೂ) ಐಂದ್ರಂ ತೂಣೀಯುಗಂ (ಇಂದ್ರದತ್ತವಾದ ಜತೆ ಬತ್ತಳಿಕೆಗಳನ್ನು) ಚ(ಮತ್ತು) ಬ್ರಾಹ್ಮಂ ಅಸ್ತ್ರಂ(ಬ್ರಹ್ಮದತ್ತವಾದ ಅಸ್ತ್ರವನ್ನು) ಚ(ಮತ್ತು) ಖಡ್ಗಂ (ಖಡ್ಗವನ್ನು ) ಪ್ರದದೌ (ನೀಡಿದರು) ಭಾವಾರ್ಥ: ಮಹರ್ಷಿ ಅಗಸ್ತರು ರಾಮನಿಗೆ ವಿಶ್ವಕರ್ಮನಿರ್ಮಿತವಾದ ಹೇಮವಜ್ರವಿಭೂಷಿತವಾದ ವೈಷ್ಣವ ಧನುಸ್ಸನ್ನೂ, ಇಂದ್ರನಿಂದ ಕೊಡಲ್ಪಟ್ಟ ಉಜ್ವಲವಾದ ನಿಶಿತವಾದ ಅಕ್ಷಯ ಬಾಣಗಳಿಂದ ಕೂಡಿದ ಬತ್ತಳಿಕೆಗಳನ್ನೂ ಬ್ರಹ್ಮಾಸ್ತ್ರವನ್ನೂ, ರಜತಕೋಶದಿಂದ ಕೂಡಿದ ಸ್ವರ್ಣಾಲಂಕೃತವಾದ ಖಡ್ಗವನ್ನೂ ನೀಡಿದರು. ತತಃ ಸ ಗಚ್ಛನ್ಕಾಕುತ್ಸ್ಥಃ ಸಮಾಗಮ್ಯ ಜಟಾಯುಷಮ್। ವೈದೇಹ್ಯಾಃ ಪಾಲನಾಯೈನಂ ಶ್ರದ್ಧಧೇ ಪಿತೃವಲ್ಲಭಮ್॥೩।೫॥ ಪದಚ್ಛೇದ: ತತಃ ಸಃ ಗಚ್ಛನ್ ಕಾಕುತ್ಸ್ಥಃ ಸಮಾಗಮ್ಯ ಜಟಾಯುಷಮ್। ವೈದೇಹ್ಯಾಃ ಪಾಲನಾಯ ಏನಂ ಶ್ರದ್ದಧೇ ಪಿತೃವಲ್ಲಭಮ್॥ ಅನ್ವಯ ಅರ್ಥ: ತತಃ (ಆವಾಗ) ಗಚ್ಛನ್ (ಹೋಗುತ್ತಿದ್ದ) ಸಃ ಕಾಕುತ್ಸ್ಥಃ (ಆ ರಾಘವನು) ಪಿತೃವಲ್ಲಭಮ್(ತಂದೆಗೆ ಪ್ರೀತಿಪಾತ್ರನಾದ) ಜಟಾಯುಷಮ್(ಜಟಾಯುವನ್ನು) ಸಮಾಗಮ್ಯ(ಭೇಟಿಮಾಡಿ) ವೈದೇಹ್ಯಾಃ (ಸೀತೆಯ) ಪಾಲನಾಯ(ರಕ್ಷಣೆಗಾಗಿ) ಏನಂ ಶ್ರದ್ದಧೇ(ಅವನಲ್ಲಿ ಶ್ರದ್ಧೆಯಿಟ್ಟನು) ಭಾವಾರ್ಥ: ಮುಂದುವರಿಯುತ್ತಾ ಪಂಚವಟಿಗೆ ಹೋಗುವ ದಾರಿಯಲ್ಲಿ ವಿನತೆಯ ಮಗ ಅರುಣನಿಗೆ ಶ್ಯೇನಿಯಲ್ಲಿ ಜನಿಸಿದ ಜಟಾಯುವನ್ನು ಭೇಟಿಯಾದನು. ತಂದೆಯ ಪ್ರೀತಿಯ ಮಿತ್ರನಾದ ಆತನು ಸೀತೆಯ ರಕ್ಷಣೆಯ ವಿಷಯದಲ್ಲಿ ನೀಡಿದ ಸಹಾಯಹಸ್ತವನ್ನು ರಾಮನು ಶ್ರದ್ಧೆಯಿಂದ ಸ್ವೀಕರಿಸಿ ಪ್ರತಿಪೂಜಿಸಿ ಆತನನ್ನು ಮುದದಿಂದ ಬಿಗಿದಪ್ಪಿಕೊಂಡನು. ತತಃ ಪಂಚವಟೀಂ ಪ್ರಾಪ್ಯ ತತ್ರ ಲಕ್ಷ್ಮಣನಿರ್ಮಿತಾಮ್। ಪರ್ಣಶಾಲಾಮಧ್ಯುವಾಸ ಸೀತಯಾ ಸಹಿತಃ ಸುಖಮ್॥೩।೬॥ ಪದಚ್ಛೇದ: ತತಃ ಪಂಚವಟೀಂ ಪ್ರಾಪ್ಯ ತತ್ರ ಲಕ್ಷ್ಮಣನಿರ್ಮಿತಾಮ್ ಪರ್ಣಶಾಲಾಮ್ ಅಧ್ಯುವಾಸ ಸೀತಯಾ ಸಹಿತಃ ಸುಖಮ್॥ ಅನ್ವಯ ಅರ್ಥ: ತತಃ (ನಂತರ) ಪಂಚವಟೀಂ (ಪಂಚವಟಿಯನ್ನು) ಪ್ರಾಪ್ಯ (ಸೇರಿ) ತತ್ರ (ಅಲ್ಲಿ) ಲಕ್ಷ್ಮಣನಿರ್ಮಿತಾಮ್ (ಲಕ್ಷ್ಮಣನಿಂದ ನಿರ್ಮಿಸಲ್ಪಟ್ಟ) ಪರ್ಣಶಾಲಾಮ್(ಎಲೆಮನೆಯಲ್ಲಿ) ಸೀತಯಾ ಸಹಿತಃ (ಸೀತೆಯೊಂದಿಗೆ) ಸುಖಂ(ಸುಖವಾಗಿ) ಅಧ್ಯುವಾಸ(ವಾಸಿಸಿದನು). ಭಾವಾರ್ಥ: ಹಿಂದೆ ಮುನಿಗಳಿಂದ ನಿರ್ದೇಶಿಸಲ್ಪಟ್ಟಂತೆ ರಾಮನು ಆನೆಹುಲಿಗಳೇ ಮೊದಲಾದ ಕಾಡುಮೃಗಗಳಿಂದ ಕೂಡಿದ ಪಂಚವಟಿಯನ್ನು ಸೇರಿದನು. ಸಮಿತ್ ದರ್ಭೆ ಹೂ ಹಣ್ಣುಗಳು ಧಾರಾಳವಾಗಿ ಸಿಗುವ ಜಲಾಶಯವಿರುವ ಪ್ರದೇಶದಲ್ಲಿ ಲಕ್ಷ್ಮಣನು ನಿರ್ಮಿಸಿದ ಪರ್ಣಕುಟಿಯಲ್ಲಿ ರಾಮನು ಸೀತೆಯೊಂದಿಗೆ ಸುಖವಾಗಿ ವಾಸಿಸಿದನು. ತತ್ರಾಭ್ಯೇತ್ಯೈಕದಾ ರಾಮಂ ಶೂರ್ಪಣಖಾಽಭಿಕಾ। ತನ್ನಿರಸ್ತಾ ಲಕ್ಷ್ಮಣಂ ಚ ವವ್ರೇ ಸೋಽಪಿ ನಿರಾಕರೋಽತ್॥೩।೭॥ ಪದಚ್ಛೇದ: ತತ್ರ ಅಭ್ಯೇತ್ಯ ಏಕದಾ ರಾಮಂ ವವ್ರೇ ಶೂರ್ಪಣಖಾ ಅಭಿಕಾ ತನ್ನಿರಸ್ತಾ ಲಕ್ಷ್ಮಣಂ ಚ ವವ್ರೇ ಸಃ ಅಪಿ ನಿರಾಕರೋತ್॥ ಅನ್ವಯ ಅರ್ಥ: ಏಕದಾ (ಒಂದು ಬಾರಿ) ಅಭಿಕಾ (ಕಾಮುಕಿಯಾದ) ಶೂರ್ಪಣಖಾ(ಶೂರ್ಪಣಖಿಯು) ತತ್ರ (ಅಲ್ಲಿಗೆ) ಅಭ್ಯೇತ್ಯ (ಆಗಮಿಸಿ) ರಾಮಂ (ರಾಮನನ್ನು) ವವ್ರೇ (ವರಿಸಿದಳು) ತನ್ನಿರಸ್ತಾ (ಅವನಿಂದ ನಿರಾಕೃತಳಾಗಿ) ಲಕ್ಷ್ಮಣಂ ಚ(ಲಕ್ಷ್ಮಣನನ್ನೂ) ವವ್ರೇ (ವರಿಸಿದಳು) ಸಃ ಅಪಿ (ಅವನೂ ಕೂಡ) ನಿರಾಕರೋತ್(ನಿರಾಕರಿಸಿದನು) ಭಾವಾರ್ಥ: ಹೀಗಿರಲಾಗಿ ಒಂದು ದಿನ ಕಾಮುಕಿಯಾದ ರಾವಣಸಹೋದರಿ ಶೂರ್ಪಣಖಿಯು ಅಲ್ಲಿಗೆ ಆಗಮಿಸಿದಳು. ರಾಮನನ್ನು ಕಂಡು ಆತನನ್ನು ಕಾಮಿಸಿದಳು. ಏಕಪತ್ನೀವ್ರತಸ್ಥನಾದ ರಾಮನು ಆಕೆಯನ್ನು ನಿರಾಕರಿಸಲು ಲಕ್ಷ್ಮಣನೆಡೆಗೆ ನಡೆದಳು. ಆತನೂ ಅವಳ ಬಯಕೆಯನ್ನು ನಿರಾಕರಿಸಿದನು. ರಾಮಮೇವ ತತೋ ವವ್ರೇ ಕಾಮಾರ್ತಾ ಕಾಮಸನ್ನಿಭಮ್। ಪುನಶ್ಚ ಧಿಕ್ಕೃತಾ ತೇನ ಸೀತಾಮಭ್ಯದ್ರವದ್ರುಷಾ॥೩।೮॥ ಪದಚ್ಛೇದ: ರಾಮಂ ಏವ ತತಃ ವವ್ರೇ ಕಾಮಾರ್ತಾ ಕಾಮಸನ್ನಿಭಮ್। ಪುನಃ ಚ ಧಿಕ್ಕೃತಾ ತೇನ ಸೀತಾಂ ಅಭ್ಯದ್ರವತ್ ರುಷಾ ॥ ಅನ್ವಯ ಅರ್ಥ: ತತಃ (ಆಗ) ಕಾಮಾರ್ತಾ ಸಾ (ಕಾಮಪೀಡಿತಳಾದ ಅವಳು) ಕಾಮಸನ್ನಿಭಮ್(ಮನ್ಮಥನಂತಿರುವ) ರಾಮಮ್ ಏವ( ರಾಮನನ್ನೇ) ವವ್ರೇ (ಕಾಮಿಸಿದಳು) ಪುನಃ ಚ(ಮತ್ತೊಮ್ಮೆ) ತೇನ (ಅವನಿಂದ) ಧಿಕ್ಕೃತಾ (ಧಿಕ್ಕರಿಸಲ್ಪಟ್ಟು) ರುಷಾ (ರೋಷದಿಂದ) ಸೀತಾಂ (ಸೀತೆಯನ್ನು) ಅಭ್ಯದ್ರವತ್(ಬೆಂಬತ್ತಿದಳು) ಭಾವಾರ್ಥ: ಅವನೂ ನಿರಾಕರಿಸಿದಾಗ ಕಾಮಪೀಡಿತಳಾದ ಅವಳು ತಿರುಗಿ ಮನ್ಮಥನಂತಿರುವ ರಾಮನನ್ನೇ ಬಯಸಿದಳು. ಕಾಮಕ್ಕೊಲಿಯದ ರಾಮನು ಪುನಃ ಅವಳನ್ನು ಧಿಕ್ಕರಿಸಿದಾಗ ಕ್ರೋಧದಿಂದ ಸೀತೆಯನ್ನು ಹಿಡಿಯಲು ಧಾವಿಸಿದಳು. ಲಕ್ಷ್ಮಣೇನ ತದಾ ರೋಷಾತ್ಕೃತ್ತಶ್ರವಣನಾಸಿಕಾ। ಸಾ ತು ಗತ್ವಾ ಜನಸ್ಥಾನಂ ಖರಾಯೈನಂ ನ್ಯವೇದಯತ್॥೩।೯॥ ಪದಚ್ಛೇದ: ಲಕ್ಷ್ಮಣೇನ ತದಾ ರೋಷಾತ್ ಕೃತ್ತಶ್ರವಣನಾಸಿಕಾ ಸಾ ತು ಗತ್ವಾ ಜನಸ್ಥಾನಂ ಖರಾಯ ಏನಂ ನ್ಯವೇದಯತ್ ॥ ಅನ್ವಯ ಅರ್ಥ: ತದಾ(ಆಗ) ರೋಷಾತ್ (ಕೋಪದಿಂದ) ಲಕ್ಷ್ಮಣೇನ (ಲಕ್ಷ್ಮಣನನಿಂದ) ಕೃತ್ತಶ್ರವಣನಾಸಿಕಾ (ಕೊಯ್ಯಲ್ಪಟ್ಟ ಕಿವಿಮೂಗಿನವಳಾದ) ಸಾ (ಅವಳು) ಜನಸ್ಥಾನಂ ಗತ್ವಾ (ಜನಸ್ಥಾನಕ್ಕೆ ಹೋಗಿ) ಖರಾಯ(ಖರನಿಗೆ) ಏನಂ (ಇದನ್ನು) ನ್ಯವೇದಯತ್(ನಿವೇದಿಸಿಕೊಂಡಳು) ಭಾವಾರ್ಥ: ಅವಳು ಸೀತೆಯನ್ನು ಹಿಂಸಿಸುವುದನ್ನು ಕಂಡು ರೋಷಾವಿಷ್ಟನಾದ ಲಕ್ಷಣನು ಆಕೆಯ ಕಿವಿಮೂಗುಗಳನ್ನು ಕೊಯ್ದು ಹಾಕಿದನು. ಜನಸ್ಥಾನದಲ್ಲಿದ್ದ ಅವಳ ಮಲಸಹೋದರನಾದ ಖರನಲ್ಲಿಗೆ ಧಾವಿಸಿದ ಅವಳು ಈ ವಿಷಯವನ್ನು ಅವನಿಗರುಹಿದಳು. ತದಾಕರ್ಣ್ಯ ಖರಃ ಕ್ರುದ್ಧೋ ರಾಘವಂ ಹಂತುಮಾಯಯೌ। ದೂಷಣತ್ರಿಶಿರೋಮುಖ್ಯೈರ್ಯಾತುಧಾನೈಃ ಸಮನ್ವಿತಃ॥೩।೧೦॥ ಪದಚ್ಛೇದ: ತತ್ ಆಕರ್ಣ್ಯ ಖರಃ ಕ್ರುದ್ಧಃ ರಾಘವಂ ಹಂತುಮ್ ಆಯಯೌ ದೂಷಣತ್ರಿಶಿರೋಮುಖ್ಯೈಃ ಯಾತುಧಾನೈಃ ಸಮನ್ವಿತಃ॥ ಅನ್ವಯ ಅರ್ಥ: ತತ್ ಆಕರ್ಣ್ಯ (ಅದನ್ನು ಕೇಳಿ) ಕ್ರುದ್ಧಃ (ಕುಪಿತನಾದ) ಖರಃ(ಖರನು) ದೂಷಣತ್ರಿಶಿರೋಮುಖ್ಯೈಃ (ದೂಷಣ ತ್ರಿಶಿರರೇ ಮೊದಲಾದವರು ಪ್ರಮುಖರಾಗಿರುವ) ಯಾತುಧಾನೈಃ ಸಮನ್ವಿತಃ(ರಾಕ್ಷಸರಿಂದೊಡಗೂಡಿ) ರಾಘವಂ (ರಾಮನನ್ನು) ಹಂತುಂ(ಕೊಲ್ಲಲು) ಆಯಯೌ(ಬಂದನು) ಭಾವಾರ್ಥ: ತಂಗಿಯ ಮಾತಿನಿಂದ ಕೋಪಗೊಂಡ ರಾಕಾಪುತ್ರ ಖರನು ತನ್ನೊಂದಿಗೆ ಇದ್ದ ತಮ್ಮನಾದ ದೂಷಣ, ತ್ರಿಶಿರನೇ ಮೊದಲಾದ ರಾಕ್ಷಸಪ್ರಮುಖರನ್ನು ಕೂಡಿಕೊಂಡು ರಾಮನನ್ನು ಕೊಲ್ಲಲು ಬಂದನು. ತತ್ಕ್ಷಣಂ ಲಕ್ಷ್ಮಣೇ ಸೀತಾಂ ನಿಧಾಯ ರಘುನಂದನಃ । ಖರಂ ಸಹಾನುಗಂ ಸಂಖ್ಯೇ ಜಘಾನಾಲಘುವಿಕ್ರಮಃ॥೩।೧೧॥ ಪದಚ್ಛೇದ: ತತ್ಕ್ಷಣಂ ಲಕ್ಷ್ಮಣೇ ಸೀತಾಂ ನಿಧಾಯ ರಘುನಂದನಃ ಖರಂ ಸಹಾನುಗಂ ಸಂಖ್ಯೇ ಜಘಾನ ಅಲಘುವಿಕ್ರಮಃ॥ ಅನ್ವಯ ಅರ್ಥ: ತತ್ಕ್ಷಣಂ (ತಕ್ಷಣವೇ) ಅಲಘುವಿಕ್ರಮಃ(ಅಲ್ಪವಲ್ಲದ ಪರಾಕ್ರಮವುಳ್ಳ) ರಘುನಂದನಃ (ರಾಮನು) ಸೀತಾಂ (ಸೀತೆಯನ್ನು) ಲಕ್ಷ್ಮಣೇ(ಲಕ್ಷ್ಮಣನ ರಕ್ಷೆಯಲ್ಲಿ) ನಿಧಾಯ (ಇಟ್ಟು) ಸಹಾನುಗಂ(ಅನುಚರಸಹಿತನಾದ) ಖರಂ (ಖರನನ್ನು) ಸಂಖ್ಯೇ (ಯುದ್ಧದಲ್ಲಿ) ಜಘಾನ (ಕೊಂದನು) ಭಾವಾರ್ಥ: ಆ ಕೂಡಲೇ ಅಮಿತಪರಾಕ್ರಮಿಯಾದ ರಾಮನು ಸೀತೆಯನ್ನು ರಕ್ಷಣೆ ಮಾಡಿಕೊಳ್ಳುವಂತೆ ಲಕ್ಷ್ಮಣನಿಗೆ ನೇಮಿಸಿ ಹದಿನಾಲ್ಕುಸಾವಿರಸಹಚರಸಹಿತ ಖರನನ್ನು ಯುದ್ಧದಲ್ಲಿ ಸಂಹಾರ ಮಾಡಿದನು. ತತಃ ಶೂರ್ಪಣಖಾ ಗತ್ವಾ ಲಂಕಾಂ ಶೋಕಸಮನ್ವಿತಾ। ನ್ಯವೇದಯದ್ರಾವಣಾಯ ವೃತ್ತಾಂತಂ ಸರ್ವಮಾದಿತಃ ॥೩।೧೨॥ ಪದಚ್ಛೇದ: ತತಃ ಶೂರ್ಪಣಖಾ ಗತ್ವಾ ಲಂಕಾಂ ಶೋಕಸಮನ್ವಿತಾ ನ್ಯವೇದಯತ್ ರಾವಣಾಯ ವೃತ್ತಾಂತಂ ಸರ್ವಮ್ ಆದಿತಃ॥ ಅನ್ವಯ ಅರ್ಥ: ತತಃ(ಆಗ) ಶೂರ್ಪಣಖಾ (ಶೂರ್ಪಣಖಿಯು) ಶೋಕಸಮನ್ವಿತಾ(ದುಃಖದಿಂದ ಕೂಡಿದವಳಾಗಿ) ಲಂಕಾಂ ಗತ್ವಾ (ಲಂಕೆಗೆ ಹೋಗಿ) ಆದಿತಃ(ಮೊದಲಿನಿಂದ) ಸರ್ವಂ ವೃತ್ತಾಂತಂ (ಎಲ್ಲಾ ವಿಷಯವನ್ನೂ) ರಾವಣಾಯ (ರಾವಣನಿಗೆ) ನ್ಯವೇದಯತ್ (ಅರುಹಿದಳು) ಭಾವಾರ್ಥ: ಮಹೂರ್ತಕಾಲದಲ್ಲಿ ಖರದೂಷಣತ್ರಿಶಿರರು ಸೈನ್ಯಸಮೇತರಾಗಿ ಹತರಾದುದನ್ನು ಕಂಡು ಶೂರ್ಪಣಖಿಯು ದುಃಖಿತಳಾಗಿ ಮೇಘನಾದ ಮಾಡುತ್ತಾ ಲಂಕೆಯನ್ನು ಸೇರಿದಳು. ನಡೆದ ವೃತ್ತಾಂತವನ್ನು ಮೊದಲಿನಿಂದ ಬೇಕಾದಂತೆ ತಿರುಚಿ ಜಗವನ್ನಳಿಸುವ ರಾವಣನಿಗೆ ಅರುಹಿದಳು. ತಚ್ಛ್ರುತ್ವಾ ರಾವಣಃ ಸೀತಾಂ ಹರ್ತುಂ ಕೃತಮತಿಸ್ತದಾ। ಮಾರೀಚಸ್ಯಾಶ್ರಮಂ ಪ್ರಾಪ್ಯ ಸಾಹಾಯ್ಯೇ ತಮಚೋದಯತ್॥೩।೧೩॥ ಪದಚ್ಛೇದ: ತತ್ ಶ್ರುತ್ವಾ ರಾವಣಃ ಸೀತಾಂ ಹರ್ತುಂ ಕೃತಮತಿಃ ತದಾ ಮಾರೀಚಸ್ಯ ಆಶ್ರಮಂ ಪ್ರಾಪ್ಯ ಸಾಹಾಯ್ಯೇ ತಮ್ ಅಚೋದಯತ್। ಅನ್ವಯ ಅರ್ಥ: ತತ್ ಶ್ರುತ್ವಾ (ಅದನ್ನು ಕೇಳಿ) ತದಾ (ಆಗ) ರಾವಣಃ(ರಾವಣನು) ಸೀತಾಂ ಹರ್ತುಂ(ಸೀತೆಯನ್ನು ಅಪಹರಿಸಲು) ಕೃತಮತಿಃ (ಭೂತ್ವಾ) (ನಿರ್ಣಯಿಸಿದವನಾಗಿ) ಮಾರೀಚಸ್ಯ(ಮಾರೀಚನ) ಆಶ್ರಮಂ ಪ್ರಾಪ್ಯ(ಆಶ್ರಮವನ್ನು ಸೇರಿ) ಸಾಹಾಯ್ಯೇ (ಸಹಾಯಕ್ಕಾಗಿ) ತಮ್ (ಅವನನ್ನು) ಅಚೋದಯತ್ (ಪ್ರಚೋದಿಸಿದನು). ಭಾವಾರ್ಥ: ಅಕಂಪನನ ಮಾತಿನಿಂದ ಪ್ರಚೋದಿತನಾಗಿ ಸೀತೆಯನ್ನು ಅಪಹರಿಸಲು ಹೊರಟ ರಾವಣನನ್ನು ಮಾರೀಚನು ಬುದ್ಧಿ ಹೇಳಿ ಹಿಂದಿರುಗಿಸಿದ್ದರೂ ಈಗ ಶೂರ್ಪಣಖಿಯು ಮಾತಿನಿಂದ ಕೆರಳಿ ಸೀತೆಯನ್ನು ಅಪಹರಿಸಿಯೇ ಸಿದ್ಧ ಎಂಬ ದೃಢನಿರ್ಧಾರಕ್ಕೆ ಬಂದನು. ಪುನಃ ಮಾರೀಚನ ಬಳಿಸಾರಿ ಸಹಾಯಕ್ಕಾಗಿ ಅವನನ್ನು ಪ್ರಚೋದಿಸಿದನು. ಸೋಽಪಿ ಸ್ವರ್ಣಮೃಗೋ ಭೂತ್ವಾ ಸೀತಾಯಾಃ ಪ್ರಮುಖೇಽಚರತ್। ಸಾ ತು ತಂ ಸಮಾಹರ್ತುಂ ಭರ್ತಾರಂ ಸಮಯಾಚತ॥೩।೧೪॥ ಪದಚ್ಛೇದ: ಸಃ ಅಪಿ ಸ್ವರ್ಣಮೃಗಃ ಭೂತ್ವಾ ಸೀತಾಯಾಃ ಪ್ರಮುಖೇ ಅಚರತ್। ಸಾ ತು ತಂ ಸಮಾಹರ್ತುಂ ಭರ್ತಾರಂ ಸಮಯಾಚತ ॥ ಅನ್ವಯ ಅರ್ಥ: ಸಃ ಅಪಿ(ಆ ಮಾರೀಚನೂ) ಸ್ವರ್ಣಮೃಗಃ ಭೂತ್ವಾ (ಚಿನ್ನದ ಜಿಂಕೆಯಾಗಿ) ಸೀತಾಯಾಃ (ಸೀತೆಯ) ಪ್ರಮುಖೇ (ಎದುರಿನಲ್ಲಿ) ಅಚರತ್ (ಅಲೆದಾಡಿದನು) ಸಾ ತು(ಸೀತೆಯಾದರೋ) ತಂ (ಆ ಜಿಂಕೆಯನ್ನು) ಸಮಾಹರ್ತುಂ (ಹಿಡಿದುತರಲು) ಭರ್ತಾರಂ (ಪತಿಯನ್ನು) ಅಯಾಚತ(ಬೇಡಿಕೊಂಡಳು) ಭಾವಾರ್ಥ: ರಾವಣನ ಬಲವಂತಕ್ಕೆ ಮಣಿದ ಮಾರೀಚನು ರಜತಬಿಂದುಗಳಿಂದ ಚಿತ್ರಿತವಾದ ಮೋಹಕವಾದ ಚಿನ್ನದ ಜಿಂಕೆಯ ರೂಪಧರಿಸಿ ಕದಲೀವೃಕ್ಷಗಳಿಂದ ಆವೃತವಾದ ರಾಮಾಶ್ರಮ ಪ್ರದೇಶದಲ್ಲಿ ಸೀತೆಯೆದುರಿನಲ್ಲಿ ಅಲೆದಾಡಿದನು. ವಿಧಿಯಿಂದ ಪ್ರಚೋದಿತಳಾದ ಸೀತೆಯೂ ಅದನ್ನು ಕಂಡು ಮೋಹಕ್ಕೊಳಗಾದಳು. ಇದು ನಿಶಾಚರರ ಮಾಯೆಯೆಂದು ಲಕ್ಷ್ಮಣನು ಎಚ್ಚರಿಸಿದರೂ ಕೇಳದೆ ಅದನ್ನು ಹಿಡಿದುತರಲು ರಾಮನನ್ನು ಯಾಚಿಸಿದಳು. ನಿಯುಜ್ಯ ಲಕ್ಷ್ಮಣಂ ಸೀತಾಂ ರಕ್ಷಿತುಂ ರಘುನಂದನಃ । ಅನ್ವಗಚ್ಛನ್ಮೃಗಂ ತೂರ್ಣಂ ದ್ರವಂತಂ ಕಾನನಾಂತರೇ॥೩।೧೫॥ ಪದಚ್ಛೇದ: ನಿಯುಜ್ಯ ಲಕ್ಷ್ಮಣಂ ಸೀತಾಂ ರಕ್ಷಿತುಂ ರಘುನಂದನಃ ಅನ್ವಗಚ್ಛತ್ ಮೃಗಂ ತೂರ್ಣಂ ದ್ರವಂತಂ ಕಾನನಾಂತರೇ॥ ಅನ್ವಯ ಅರ್ಥ: ಸೀತಾಂ (ಸೀತೆಯನ್ನು) ರಕ್ಷಿತುಂ(ರಕ್ಷಿಸಲು) ಲಕ್ಷ್ಮಣಂ(ಲಕ್ಷ್ಮಣನನ್ನು) ನಿಯುಜ್ಯ (ನೇಮಿಸಿ) ರಘುನಂದನಃ (ರಾಮನು) ಕಾನನಾಂತರೇ (ಕಾಡಿನೊಳಗೆ) ತೂರ್ಣಂ (ಶೀಘ್ರವಾಗಿ) ದ್ರವಂತಂ (ಓಡುತ್ತಿದ್ದ) ಮೃಗಂ (ಜಿಂಕೆಯನ್ನು) ಅನ್ವಗಚ್ಛತ್ (ಹಿಂಬಾಲಿಸಿದನು) ಭಾವಾರ್ಥ: ಸೀತೆಯನ್ನು ರಕ್ಷಿಸಲು ಲಕ್ಮಣನನ್ನು ನೇಮಿಸಿ ರಾಮನು ಮಿಂಚಿನ ವೇಗದಲ್ಲಿ ಅಲೆದಾಡುತ್ತಿದ್ದ ಮಾಯಾಮೃಗವನ್ನು ಹಿಂಬಾಲಿಸಿದನು. ವಿವ್ಯಾಧ ಚ ಮೃಗಂ ರಾಮಃ ಸ ನಿಜಂ ರೂಪಮಾಸ್ಥಿತಃ। ಹಾ ಸೀತೇ ಲಕ್ಷ್ಮಣೇತ್ಯೇವಂ ರುದನ್ಪ್ರಾಣಾನ್ಸಮತ್ಯಜತ್॥೩।೧೬॥ ಪದಚ್ಛೇದ: ವಿವ್ಯಾಧ ಚ ಮೃಗಂ ರಾಮಃ ಸಃ ನಿಜಂ ರೂಪಮ್ ಆಸ್ಥಿತಃ ಹಾ ಸೀತೇ ಲಕ್ಷ್ಮಣ ಇತಿ ಏವಂ ರುದನ್ ಪ್ರಾಣಾನ್ ಸಮತ್ಯಜತ್॥ ಅನ್ವಯ ಅರ್ಥ: ರಾಮಃ(ರಾಮನು) ಮೃಗಂ(ಜಿಂಕೆಯನ್ನು) ವಿವ್ಯಾಧ (ಹೊಡೆದನು) ಸಃ(ಅವನು/ಜಿಂಕೆಯು) ನಿಜಂ ರೂಪಂ(ನಿಜರೂಪವನ್ನು) ಆಸ್ಥಿತಃ (ತಳೆದು) ಹಾ ಸೀತೇ ಲಕ್ಷ್ಮಣ(ಹಾ ಸೀತೇ ಲಕ್ಷ್ಮಣ) ಇತಿ ಏವಂ(ಎಂಬುದಾಗಿ) ರುದನ್(ರೋದಿಸುತ್ತಾ) ಪ್ರಾಣಾನ್ ಸಮತ್ಯಜತ್(ಪ್ರಾಣತ್ಯಾಗ ಮಾಡಿದನು) ಭಾವಾರ್ಥ: ಕಂಡೂ ಕಾಣದಂತೆ ಅಲೆದಾಡುತ್ತಿದ್ದ ಜಿಂಕೆಯ ಮೇಲೆ ಕೋಪಗೊಂಡ ರಾಮನು ಬ್ರಹ್ಮನಿರ್ಮಿತವಾದ ಬಾಣದಿಂದ ಅದನ್ನು ಹೊಡೆದನು. ಜಿಂಕೆಯ ರೂಪದಲ್ಲಿದ್ದ ಮಾರೀಚನು ಆಘಾತಗೊಂಡು ನಿಜರೂಪ ಹೊಂದಿ ಕಪಟದಿಂದ ರಾಮನ ಧ್ವನಿಯಲ್ಲೇ ಹಾ ಸೀತೇ! ಹಾ ಲಕ್ಷ್ಮಣ! ಎಂದು ರೋದಿಸುತ್ತಾ ಪ್ರಾಣತ್ಯಾಗ ಮಾಡಿದನು. ಏತದಾಕರ್ಣ್ಯ ವೈದೇಹ್ಯಾ ಲಕ್ಷ್ಮಣಶ್ಚೋದಿತೋ ಭೃಶಮ್। ತದ್ರಕ್ಷಾಂ ದೇವತಾಃ ಪ್ರಾರ್ಥ್ಯ ಪ್ರಯಯೌ ರಾಘವಾಂತಿಕಮ್॥೩।೧೭॥ ಪದಚ್ಛೇದ: ಏತತ್ ಆಕರ್ಣ್ಯ ವೈದೇಹ್ಯಾ ಲಕ್ಷ್ಮಣಃ ಚೋದಿತಃ ಭೃಶಮ್ ತದ್ರಕ್ಷಾಂ ದೇವತಾಃ ಪ್ರಾರ್ಥ್ಯ ಪ್ರಯಯೌ ರಾಘವಾಂತಿಕಮ್॥ ಅನ್ವಯ ಅರ್ಥ: ಏತತ್ (ಇದನ್ನು) ಆಕರ್ಣ್ಯ (ಕೇಳಿ) ವೈದೇಹ್ಯಾ(ಸೀತೆಯಿಂದ) ಭೃಶಂ(ಅತಿಶಯವಾಗಿ) ಚೋದಿತಃ (ಪ್ರಚೋದಿತನಾಗಿ) ಲಕ್ಷ್ಮಣಃ((ಲಕ್ಷ್ಮಣನು) ತದ್ರಕ್ಷಾಂ (ಅವಳ ರಕ್ಷಣೆಯನ್ನು ಕುರಿತು) ದೇವತಾಃ (ದೇವತೆಗಳನ್ನು) ಪ್ರಾರ್ಥ್ಯ (ಪ್ರಾರ್ಥಿಸಿ) ರಾಘವಾಂತಿಕಂ(ರಾಮನ ಬಳಿಗೆ) ಪ್ರಯಯೌ(ಹೋದನು) ಭಾವಾರ್ಥ: ರಾಮನ ಧ್ವನಿಯಲ್ಲಿ ಆರ್ತರವವನ್ನು ಕೇಳಿ ಸೀತೆಯು ಎದೆಗುಂದಿದಳು. ಅವಳ ಮಾತಿನಿಂದ ಪ್ರಚೋದಿತನಾಗಿ ಸೀತೆಯ ರಕ್ಷಣೆಗಾಗಿ ದೇವತೆಗಳಲ್ಲಿ ಪ್ರಾರ್ಥಿಸಿ ಲಕ್ಷ್ಮಣನು ರಾಮನ ಬಳಿಗೆ ತೆರಳಿದನು. ತದಂತರೇ ಸಮಾಸಾದ್ಯ ರಾವಣೋ ಯತಿರೂಪಧೃತ್। ಸೀತಾಂ ಗೃಹೀತ್ವಾ ಪ್ರಯಯೌ ಗಗನೇನ ಮುದಾನ್ವಿತಃ॥೩।೧೮॥ ಪದಚ್ಛೇದ: ತದಂತರೇ ಸಮಾಸಾದ್ಯ ರಾವಣಃ ಯತಿರೂಪಧೃತ್ ಸೀತಾಂ ಗೃಹೀತ್ವಾ ಪ್ರಯಯೌ ಗಗನೇನ ಮುದಾನ್ವಿತಃ॥ ಅನ್ವಯ ಅರ್ಥ: ತದಂತರೇ (ಆ ಸಮಯದಲ್ಲಿ) ಯತಿರೂಪಧೃತ್ (ಸನ್ಯಾಸಿರೂಪಧರಿಸಿದ) ರಾವಣಃ(ರಾವಣನು) ಸಮಾಸಾದ್ಯ (ಸಮೀಪಿಸಿ) ಸೀತಾಂ ಗೃಹೀತ್ವಾ (ಸೀತೆಯನ್ನು ಹಿಡಿದು) ಮುದಾನ್ವಿತಃ (ಹರ್ಷದಿಂದ ಕೂಡಿದವನಾಗಿ) ಗಗನೇನ (ಆಕಾಶಮಾರ್ಗವಾಗಿ) ಪ್ರಯಯೌ (ಹೊರಟುಹೋದನು) ಭಾವಾರ್ಥ: ತಕ್ಷಣವೇ ಯತಿರೂಪಧರಿಸಿದ ರಾವಣನು ಆಶ್ರಮದಲ್ಲಿ ಏಕಾಂಗಿಯಾಗಿದ್ದ ಸೀತೆಯನ್ನು ಸಮೀಪಿಸಿದನು. ಎಡಗೈಯಲ್ಲಿ ಆಕೆಯ ಕೂದಲನ್ನೂ ಬಲಗೈಯಲ್ಲಿ ತೊಡೆಗಳನ್ನೂ ಹಿಡಿದು ಆಕೆಯನ್ನು ಎತ್ತಿಕೊಂಡು ಕಾರ್ಯಸಾಧಿಸಿದೆನೆಂಬ ಸಂತೋಷದಿಂದ ಆಕಾಶಮಾರ್ಗವಾಗಿ ಹೊರಟುಹೋದನು. ತತೋ ಜಟಾಯುರಾಲೋಕ್ಯ ನೀಯಮಾನಾಂ ತು ಜಾನಕೀಮ್। ಪ್ರಾಹರದ್ರಾವಣಂ ಪ್ರಾಪ್ಯ ತುಂಡಪಕ್ಷನೈರ್ಭೃಶಮ್॥೩।೧೯॥ ಪದಚ್ಛೇದ: ತತಃ ಜಟಾಯುಃ ಆಲೋಕ್ಯ ನೀಯಮಾನಾಂ ತು ಜಾನಕೀಮ್ ಪ್ರಾಹರತ್ ರಾವಣಂ ಪ್ರಾಪ್ಯ ತುಂಡಪಕ್ಷನಖೈಃ ಭೃಶಮ್ ॥ ಅನ್ವಯ ಅರ್ಥ: ತತಃ (ಆಗ) ನೀಯಮಾನಾಂ (ಒಯ್ಯಲ್ಪಡುತ್ತಿರುವ) ಜಾನಕೀಂ(ಸೀತೆಯನ್ನು) ಜಟಾಯುಃ(ಜಟಾಯುವು) ಆಲೋಕ್ಯ (ನೋಡಿ) ರಾವಣಂ ಪ್ರಾಪ್ಯ(ರಾವಣನನ್ನು ಸಮೀಪಿಸಿ) (ತಂ) (ಅವನನ್ನು) ತುಂಡಪಕ್ಷನಖೈಃ(ಕೊಕ್ಕು ರೆಕ್ಕೆ ಉಗುರುಗಳಿಂದ) ಭೃಶಮ್ ( ಅತಿಶಯವಾಗಿ) ಪ್ರಾಹರತ್ (ಹೊಡೆದನು) ಭಾವಾರ್ಥ: ಸೀತೆಯನ್ನು ಒಯ್ಯುತ್ತಿರುವುದನ್ನು ಕಂಡ ಅರುಣಪುತ್ರ ಜಟಾಯುವು ಅಲ್ಲಿಗೆ ಬಂದು ರಾವಣನನ್ನು ಅಡ್ಡಗಟ್ಟಿದನು. ತನ್ನ ಬಲವಾದ ಕೊಕ್ಕು ರೆಕ್ಕೆ ಉಗುರುಗಳಿಂದ ಅವನನ್ನು ತೀವ್ರವಾಗಿ ಪುನಃ ಪುನಃ ಹೊಡೆದನು. ಛಿತ್ವೈನಂ ಚಂದ್ರಹಾಸೇನ ಪಾತಯಿತ್ವಾ ಚ ಭೂತಲೇ। ಗೃಹೀತ್ವಾ ರಾವಣಃ ಸೀತಾಂ ಪ್ರಾವಿಶನ್ನಿಜಮಂದಿರಮ್ ॥೩।೨೦॥ ಪದಚ್ಛೇದ: ಛಿತ್ವಾ ಏನಂ ಚಂದ್ರಹಾಸೇನ ಪಾತಯಿತ್ವಾ ಚ ಭೂತಲೇ ಗೃಹೀತ್ವಾ ರಾವಣಃ ಸೀತಾಂ ಪ್ರಾವಿಶತ್ ನಿಜಮಂದಿರಮ್ ॥ ಅನ್ವಯ ಅರ್ಥ: ಏನಂ(ಅವನನ್ನು) ಚಂದ್ರಹಾಸೇನ(ಚಂದ್ರಹಾಸದಿಂದ) ಛಿತ್ವಾ(ಕಡಿದು) ಭೂತಲೇ (ನೆಲದ ಮೇಲೆ) ಪಾತಯಿತ್ವಾ (ಬೀಳಿಸಿ) ರಾವಣಃ (ರಾವಣನು) ಸೀತಾಂ (ಸೀತೆಯನ್ನು) ಗೃಹೀತ್ವಾ (ಹಿಡಿದು ಕೊಂಡು) ನಿಜಮಂದಿರಂ(ತನ್ನರಮನೆಯನ್ನು) ಪ್ರಾವಿಶತ್) ಭಾವಾರ್ಥ: ತನ್ನನ್ನು ಗಾಯಗೊಳಿಸಿದ ಜಟಾಯುವಿನ ರೆಕ್ಕೆ ಪಾದಗಳನ್ನು ರಾವಣನು ಶಿವದತ್ತವಾದ ಚಂದ್ರಹಾಸವೆಂಬ ತನ್ನ ಖಡ್ಗದಿಂದ ಕತ್ತರಿಸಿ ಅವನನ್ನು ನೆಲದ ಮೇಲೆ ಬೀಳಿಸಿದನು. ಬಳಿಕ ಸೀತೆಯನ್ನೆತ್ತಿಕೊಂಡು ಲಂಕೆಯಲ್ಲಿನ ತನ್ನ ಅರಮನೆಯನ್ನು ಸೇರಿಕೊಂಡನು ಅಶೋಕವನಿಕಾಮಧ್ಯೇ ಸಂಸ್ಥಾಪ್ಯ ಜನಕಾತ್ಮಜಾಮ್। ರಾವಣೋ ರಕ್ಷಿತುಂ ಚೈನಾಂ ನಿಯುಯೋಜ ನಿಶಾಚರೀಃ॥೩।೨೧॥ ಪದಚ್ಛೇದ: ಅಶೋಕವನಿಕಾಮಧ್ಯೇ ಸಂಸ್ಥಾಪ್ಯ ಜನಕಾತ್ಮಜಾಮ್ ರಾವಣಃ ರಕ್ಷಿತುಂ ಚ ಏನಾಂ ನಿಯುಯೋಜ ನಿಶಾಚರೀಃ ॥ ಅನ್ವಯ ಅರ್ಥ: ಅಶೋಕವನಿಕಾಮಧ್ಯೇ(ಅಶೋಕವನದ ಮಧ್ಯದಲ್ಲಿ) ಜನಕಾತ್ಮಜಾಂ(ಸೀತೆಯನ್ನು) ಸಂಸ್ಥಾಪ್ಯ(ಇರಿಸಿ) ಏನಾಂ (ಇವಳನ್ನು) ರಕ್ಷಿತುಂ(ರಕ್ಷಿಸಲು) ರಾವಣಃ(ರಾವಣನು) ನಿಶಾಚರೀಃ(ರಾಕ್ಷಸಿಯರನ್ನು) ನಿಯುಯೋಜ(ನೇಮಿಸಿದನು) ಭಾವಾರ್ಥ: ಅಶೋಕವನಮಧ್ಯದಲ್ಲಿ ಸೀತೆಯನ್ನಿರಿಸಿದ ರಾವಣನು ಅವಳ ರಕ್ಷಣೆಗಾಗಿ ಮಾಂಸಭಕ್ಷಕರಾದ ಘೋರರೂಪಿ ಪಿಶಾಚೀ ರಾಕ್ಷಸಿಯರನ್ನು ನೇಮಿಸಿದನು. ಹತ್ವಾ ರಾಮಸ್ತು ಮಾರೀಚಮಾಗಚ್ಛನ್ನನುಜೇರಿತಾಮ್। ವಾರ್ತಾಮಾಕರ್ಣ್ಯ ದುಃಖಾರ್ತಃ ಪರ್ಣಶಾಲಾಮುಪಾಗಮತ್॥೩।೨೨॥ ಪದಚ್ಛೇದ: ಹತ್ವಾ ರಾಮಃ ತು ಮಾರೀಚಮ್ ಆಗಚ್ಛನ್ ಅನುಜೇರಿತಾಮ್ ವಾರ್ತಾಮ್ ಆಕರ್ಣ್ಯ ದುಃಖಾರ್ತಃ ಪರ್ಣಶಾಲಾಮ್ ಉಪಾಗಮತ್॥ ಅನ್ವಯ ಅರ್ಥ: ಮಾರೀಚಂ(ಮಾರೀಚನನ್ನು) ಹತ್ವಾ(ಕೊಂದು) ಆಗಚ್ಛನ್(ಬರುತ್ತಿದ್ದ) ರಾಮಃ(ರಾಮನು) ಅನುಜೇರಿತಾಂ (ತಮ್ಮನಿಂದ ಹೇಳಲ್ಪಟ್ಟ) ವಾರ್ತಾಮ್(ವೃತ್ತಾಂತವನ್ನು) ಆಕರ್ಣ್ಯ(ಕೇಳಿ) ದುಃಖಾರ್ತಃ(ದುಃಖಿತನಾಗಿ) ಪರ್ಣಶಾಲಾಮ್(ಪರ್ಣಶಾಲೆಯನ್ನು) ಉಪಾಗಮತ್(ಸಮೀಪಿಸಿದನು)॥ ಭಾವಾರ್ಥ: ಕಾಂಚನಮೃಗರೂಪಿಯಾದ ಮಾರೀಚನನ್ನು ಕೊಂದು ಹಿಂದಿರುಗುವಾಗ ರಾಮನು ಲಕ್ಷಮಣನನ್ನು ಕಂಡನು. ಅವನಿಂದ ವಿಚಾರ ತಿಳಿದು ದುಃಖಾರ್ತನಾಗಿ ಪರ್ಣಶಾಲೆಯ ಬಳಿಗೆ ಆಗಮಿಸಿದನು. ಅದೃಷ್ಟ್ವಾ ತತ್ರ ವೈದೇಹೀಂ ವಿಚಿನ್ವಾನೋ ವನಾಂತರೇ। ಸಹಾನುಜೋ ಗೃಧ್ರರಾಜಂ ಛಿನ್ನಪಕ್ಷಂ ದದರ್ಶ ಹ॥೩।೨೩॥ ಪದಚ್ಛೇದ: ಅದೃಷ್ಟ್ವಾ ತತ್ರ ವೈದೇಹೀಂ ವಿಚಿನ್ವಾನಃ ವನಾಂತರೇ ಸಹಾನುಜಃ ಗೃಧ್ರರಾಜಂ ಛಿನ್ನಪಕ್ಷಂ ದದರ್ಶ ಹ॥ ಅನ್ವಯ ಅರ್ಥ: ತತ್ರ(ಅಲ್ಲಿ) ವೈದೇಹೀಂ(ವೈದೇಹಿಯನ್ನು) ಅದೃಷ್ಟ್ವಾ(ಕಾಣದೆ) ಸಹಾನುಜಃ(ತಮ್ಮನೊಡನೆ) ವನಾಂತರೇ(ಕಾಡಿನೊಳಗೆ) ವಿಚಿನ್ವಾನಃ (ಹುಡುಕುವವನಾಗಿ) ಛಿನ್ನಪಕ್ಷಂ(ರೆಕ್ಕೆತುಂಡಾದ) ಗೃಧ್ರರಾಜಂ(ಗೃಧ್ರರಾಜನನ್ನು) ದದರ್ಶ(ಕಂಡನು)॥ ಭಾವಾರ್ಥ: ಹಿಂದಿರುಗಿದಾಗ ಪರ್ಣಶಾಲೆಯಲ್ಲಿ ಸೀತೆಯನ್ನು ಕಾಣದೆ ರಾಮನು ಲಕ್ಷಮಣನೊಡಗೂಡಿ ಕಾಡಿನಲ್ಲಿ ಆಕೆಯನ್ನು ಅರಸುತ್ತಾ ಹೊರಟನು. ರಾವಣನೊಡನೆ ಹೋರಾಡಿ ರೆಕ್ಕೆಗಳನ್ನು ಕಳೆದುಕೊಂಡ ಗೃಧ್ರರಾಜನಾದ ಜಟಾಯುವನ್ನು ಕಂಡನು. ತೇನೋಕ್ತಾಂ ಜಾನಕೀವಾರ್ತಾಂ ಶ್ರುತ್ವಾ ಪಶ್ಚಾನ್ಮೃತಂ ಚ ತಮ್। ದಗ್ಧ್ವಾ ಸಹಾನುಜೋ ರಾಮಶ್ಚಕ್ರೇ ತಸ್ಯೋದಕಕ್ರಿಯಾಮ್॥೩।೨೪॥ ಪದಚ್ಛೇದ:ತೇನ ಉಕ್ತಾಂ ಜಾನಕೀವಾರ್ತಾಂ ಶ್ರುತ್ವಾ ಪಶ್ಚಾತ್ ಮೃತಂ ಚ ತಮ್ ದಗ್ಧ್ವಾ ಸಹಾನುಜಃ ರಾಮಃ ಚಕ್ರೇ ತಸ್ಯ ಉದಕಕ್ರಿಯಾಮ್॥ ಅನ್ವಯ ಅರ್ಥ: ತೇನ (ಅವನಿಂದ) ಉಕ್ತಾಂ(ಹೇಳಲ್ಪಟ್ಟ) ಜಾನಕೀವಾರ್ತಾಂ (ಸೀತೆಯ ವೃತ್ತಾಂತವನ್ನು ಶ್ರುತ್ವಾ (ಕೇಳಿ) ಸಹಾನುಜಃ(ತಮ್ಮನೊಡಗೂಡಿದ) ರಾಮಃ (ರಾಮನು) ಪಶ್ಚಾತ್ (ಅನಂತರ) ಮೃತಂ (ಮೃತನಾದ) ತಮ್ (ಅವನನ್ನು) ದಗ್ಧ್ವಾ(ದಹನಮಾಡಿ) ತಸ್ಯ(ಅವನ) ಉದಕಕ್ರಿಯಾಂ(ಉತ್ತರಕ್ರಿಯಾದಿಗಳನ್ನ) ಚಕ್ರೇ(ಮಾಡಿದನು) ॥ ಭಾವಾರ್ಥ: ಮರಣೋನ್ಮುಖನಾಗಿದ್ದ ಜಟಾಯುವು ಸೀತೆಯ ವೃತ್ತಾಂತವನ್ನು ರಾಮನಿಗೆ ಹೇಳಿ ಮೃತನಾದನು. ಅದನ್ನು ಕೇಳಿ ನಂತರ ರಾಮನು ಲಕ್ಷಮಣನೊಡಗೂಡಿ ಅವನ ಮೃತಶರೀರವನ್ನು ದಹನ ಮಾಡಿ ಸದ್ಗತಿಕಾರ್ಯಗಳನ್ನು ಮಾಡಿದನು *Dr K M Bhat Punacha:* *🏹ಹರೇ ರಾಮ🏹* *🕉 ಶ್ರೀರಾಮೋದಂತಮ್ 🔯* *ಅರಣ್ಯಕಾಂಡಃ* ಆತ್ಮನೋಽಭಿಭವಂ ಪಶ್ಚಾತ್ಕುರ್ವತೀಂ ಪಥಿ ಲಕ್ಷ್ಮಣಃ। ಅಯೋಮುಖೀಂ ಚಕಾರಾಶು ಕೃತ್ತಶ್ರವಣನಾಸಿಕಾಮ್॥೩।೨೫॥ ಪದಚ್ಛೇದ: ಆತ್ಮನಃ ಅಭಿಭವಂ ಪಶ್ಚಾತ್ ಕುರ್ವತೀಂ ಪಥಿ ಲಕ್ಷ್ಮಣಃ ಅಯೋಮುಖೀಂ ಚಕಾರ ಆಶು ಕೃತ್ತಶ್ರವಣನಾಸಿಕಾಮ್॥ ಅನ್ವಯ ಅರ್ಥ ಪಶ್ಚಾತ್ (ನಂತರ) ಪಥಿ(ದಾರಿಯಲ್ಲಿ) ಲಕ್ಷ್ಮಣಃ (ಲಕ್ಷ್ಮಣನು) ಆತ್ಮನಃ(ತನಗೆ) ಅಭಿಭವಂ (ಅವಮಾನವನ್ನು) ಕುರ್ವತೀಂ (ಮಾಡುತ್ತಿದ್ದ) ಅಯೋಮುಖೀಂ (ಅಯೋಮುಖಿಯನ್ನು) ಕೃತ್ತಶ್ರವಣನಾಸಿಕಾಮ್ (ಕತ್ತರಿಸಲ್ಪಟ್ಟ ಕಿ ಮೂಗಿನವಳನ್ನಾಗಿ) ಚಕಾರ(ಮಾಡಿದನು) ಭಾವಾರ್ಥ: ಮುಂದುವರಿಯುತ್ತಿದ್ದಂತೆ ದಾರಿಯಲ್ಲಿ ವಿಕಾರರೂಪಿಯಾದ ಅಯೋಮುಖಿಯೆಂಬ ರಾಕ್ಷಸಿಯು ಎದುರಾದಳು. ಕಾಮುಕಿಯಾಗಿ ತನ್ನನ್ನು ಆಲಿಂಗಿಸಿ ಅವಮಾನಿಸಿದ ಅವಳ ಕಿವಿ ಮೂಗುಗಳನ್ನು ಲಕ್ಷ್ಮಣನು ಕತ್ತರಿಸಿ ಹಾಕಿದನು. *Dr K M Bhat Punacha:* *🏹ಹರೇ ರಾಮ🏹* *🕉 ಶ್ರೀರಾಮೋದಂತಮ್ 🔯* *ಅರಣ್ಯಕಾಂಡಃ* ಗೃಹೀತೌ ತೌ ಕಬಂಧೇನ ಭುಜೌ ತಸ್ಯ ನ್ಯಕೃಂತತಾಮ್। ತತಸ್ತು ಯಾಚಿತೌ ತೇನ ತದ್ದೇಹಂ ದೇಹತುಶ್ಚ ತೌ॥೩।೨೬॥ ಪದಚ್ಛೇದ: ಗೃಹೀತೌ ತೌ ಕಬಂಧೇನ ಭುಜೌ ತಸ್ಯ ನ್ಯಕೃಂತತಾಮ್। ತತಃ ತು ಯಾಚಿತೌ ತೇನ ತದ್ದೇಹಂ ದೇಹತುಃ ಚ ತೌ॥ ಅನ್ವಯ ಅರ್ಥ: ಕಬಂಧೇನ(ಕಬಂಧನಿಂದ) ಗೃಹೀತೌ (ಹಿಡಿಯಲ್ಪಟ್ಟ) ತೌ (ಅವರಿಬ್ಬರು) ತಸ್ಯ (ಅವನ) ಭುಜೌ (ತೋಳುಗಳನ್ನು) ನ್ಯಕೃಂತತಾಮ್(ಕತ್ತರಿಸಿದರು) ಚ(ಮತ್ತು) ತತಃ (ನಂತರ ತೇನ (ಅವನಿಂದ) ಯಾಚಿತೌ(ಯಾಚಿಸಲ್ಪಟ್ಟ ತೌ(ಅವರಿಬ್ಬರೂ) ತದ್ದೇಹಂ (ಅವನ ದೇಹವನ್ನು) ದೇಹತುಃ ಚ (ದಹನ ಮಾಡಿದರು) ಭಾವಾರ್ಥ: ಕಬಂಧನ ನೀಳ ಬಾಹುಗಳಿಂದ ಹಿಡಿಯಲ್ಪಟ್ಟ ರಾಮಲಕ್ಷ್ಮಣರು ಏಕಕಾಲದಲ್ಲಿ ಆತನ ಬಾಹುಗಳನ್ನು ಕಡಿದು ಹಾಕಿದರು. ಈ ಮೂಲಕ ಶಾಪವಿಮೋಚನೆಗಾಗಿ ಆತನ ಅಪೇಕ್ಷೆಯಂತೆ ಆತನ ದೇಹವನ್ನು ದಹನ ಮಾಡಿದರು. ಸ ತು ದಿವ್ಯಾಕೃತಿರ್ಭೂತ್ವಾ ರಾಮಂ ಸೀತೋಪಲಬ್ಧಯೇ। ಸುಗ್ರೀವಮೃಷ್ಯಮೂಕಸ್ಥಂ ಯಾಹೀತ್ಯುಕ್ತ್ವಾ ದಿವಂ ಯಯೌ॥೩।೨೭॥ ಪದಚ್ಛೇದ: ಸಃ ತು ದಿವ್ಯಾಕೃತಿಃ ಭೂತ್ವಾ ರಾಮಂ ಸೀತೋಪಲಬ್ಧಯೇ ಸುಗ್ರೀವಂ ಋಷ್ಯಮೂಕಸ್ಥಂ ಯಾಹಿ ಇತಿ ಉಕ್ತ್ವಾ ದಿವಂ ಯಯೌ॥ ಅನ್ವಯ ಅರ್ಥ: ಸಃ ತು(ಅವನಾದರೋ) ದಿವ್ಯಾಕೃತಿಃ ಭೂತ್ವಾ (ದಿವ್ಯಶರೀರವುಳ್ಳವನಾಗಿ) ಸೀತೋಪಲಬ್ಧಯೇ (ಸೀತೆಯನ್ನು ಪಡೆಯುವುದಕ್ಕಾಗಿ) ಋಷ್ಯಮೂಕಸ್ಥಂ (ಋಷ್ಯಮೂಕಪರ್ವತದಲ್ಲಿರುವ) ಸುಗ್ರೀವಂ (ಸುಗ್ರೀವನನ್ನು) ಯಾಹಿ(ಸೇರು) ಇತಿ (ಎಂದು) ರಾಮಂ ಉಕ್ತ್ವಾ (ರಾಮನಿಗೆ ಹೇಳಿ) ದಿವಂ (ಸ್ವರ್ಗವನ್ನು) ಯಯೌ (ಸೇರಿದನು) ಭಾವಾರ್ಥ: ತನ್ನ ರಾಕ್ಷಸ ದೇಹವು ದಹನವಾದೊಡನೆ ಕಬಂಧನು ದಿವ್ಯರೂಪವನ್ನು ಹೊಂದಿದನು. ಸಂತುಷ್ಟನಾದ ಆತನು ಆಕಾಶಗತನಾಗಿ ರಾಮನನ್ನು ಕುರಿತು ಸೀತಾಪ್ರಾಪ್ತಿಗಾಗಿ ಋಷ್ಯಮೂಕಪರ್ವತದಲ್ಲಿರುವ ಸುಗ್ರೀವನನ್ನು ಸೇರು, ಚಿಂತೆಯನ್ನು ತೊರೆ ಎಂಬುದಾಗಿ ಹೇಳಿ ಸ್ವರ್ಗಲೋಕದತ್ತ ತೆರಳಿದನು. ತತಃ ಪ್ರೀತೋ ರಘುಶ್ರೇಷ್ಠಃ ಶಬರ್ಯಾಶ್ರಮಮಭ್ಯಗಾತ್। ತಯಾಽಭಿಪೂಜಿತಃ ಪಶ್ಚಾತ್ಪಂಪಾಂ ಪ್ರಾಪ ಸಲಕ್ಷ್ಮಣಃ ॥೩।೨೮॥ ॥ಇತಿ ಶ್ರೀರಾಮೋದಂತೇ ಅರಣ್ಯಕಾಂಡಃ ಸಮಾಪ್ತಃ ॥ ಪದಚ್ಛೇದ: ತತಃ ಪ್ರೀತಃ ರಘುಶ್ರೇಷ್ಠಃ ಶಬರ್ಯಾಶ್ರಮಂ ಅಭ್ಯಗಾತ್। ತಯಾ ಅಭಿಪೂಜಿತಃ ಪಶ್ಚಾತ್ ಪಂಪಾಂ ಪ್ರಾಪ ಸಲಕ್ಷ್ಮಣಃ ॥ ಅನ್ವಯ ಅರ್ಥ: ತತಃ (ನಂತರ) ಪ್ರೀತಃ (ಸಂತುಷ್ಟನಾದ) ರಘುಶ್ರೇಷ್ಠಃ(ರಾಮನು) ಶಬರ್ಯಾಶ್ರಮಂ(ಶಬರಿಯ ಆಶ್ರಮಕ್ಕೆ) ಅಭ್ಯಗಾತ್(ಹೋದನು) ತಯಾ(ಅವಳಿಂದ) ಅಭಿಪೂಜಿತಃ (ಪೂಜಿಸಲ್ಪಟ್ಟು) ಪಶ್ಚಾತ್ (ನಂತರ) ಸಲಕ್ಷ್ಮಣಃ (ಲಕ್ಷ್ಮಣನೊಂದಿಗೆ) ಪಂಪಾಂ(ಪಂಪಾಸರೋವರವನ್ನು) ಪ್ರಾಪ(ಸೇರಿದನು) ಭಾವಾರ್ಥ: ಶಾಪವಿಮೋಚಿತನಾದ ಕಬಂಧನ ಮಾತಿನಿಂದ ಸಂತುಷ್ಟನಾದ ರಾಮನು ಮುನ್ನಡೆದು ಶಬರಿಯ ಆಶ್ರಮವನ್ನು ಸೇರಿದನು. ಅವಳಿಂದ ಪೂಜಿತನಾಗಿ ಲಕ್ಷಮಣನೊಡನೆ ಪಂಪಾಸರೋವರವನ್ನು ಸೇರಿದನು. *ಇಲ್ಲಿಗೆ ಶ್ರೀರಾಮೋದಂತದ ಅರಣ್ಯಕಾಂಡವು ಮುಗಿದುದು *

Comments
Post a Comment